ಅಥಣಿ : ಬಸವೇಶನ ಸನ್ನಿಧಿಯಲ್ಲಿ ಮೂರು ಕರುಗಳಿಗೆ ಜನ್ಮ ನಿಡಿದ ಆಕಳು ( VIDEO )
ಅಥಣಿ : ಮೂರು ಕರುವಿಗೆ ಆಕಳು ಜನ್ಮ ನೀಡಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದ ರೈತನ ಮನೆಯಲ್ಲಿ ನಡೆದಿದ್ದು. ಮೂರು ಕರುಗಳು ಆರೋಗ್ಯವಾಗಿವೆ.
ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದ ರೈತ ಸದಾಶಿವ ತಗಲಿ ಎಂಬುವರ ಜವಾರಿ ಆಕಳು ಮೂರು ಕರುವಿಗೆ ಜನ್ಮ ನೀಡಿದ್ದು ಕರುಗಳು ಆರೋಗ್ಯವಾಗಿವೆ. ಒಂದು ಹೆಣ್ಣು ಹಾಗೂ ಎರಡು ಗಂಡು ಕರುಗಳು ಜನಿಸಿದದ್ದು ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಸಂದರ್ಭದಲ್ಲಿ ರೈತ ಕುಮಾರ ಮಾತನಾಡಿ, ಜವಾರಿ ಆಕಳು ಮೂರು ಕರುಗಳಿಗೆ ಜನ್ಮ ನೀಡಿದ್ದು ಅಪರೂಪವಾಗಿದೆ. ನಮ್ಮ ಸುತ್ತಮುತ್ತಲಿನ ಗ್ರಾಮದಲ್ಲಿ ಈ ರೀತಿ ನೋಡಿಲ್ಲ ಕೇಳಿಲ್ಲಾ. ಆದರೆ ಜರ್ಸಿ ಹಸುಗಳು ಎರಡು ಕರುಗಳನ್ನು ನೀಡಿರುವುದನ್ನು ಕೇಳಿದೆವೆ. ನಮ್ಮ ಜವಾರಿ ಆಕಳು ಮೂರು ಕರುಗಳನ್ನು ಹಾಕಿರುವುದು ತುಂಬಾ ಅಚ್ಚರಿ ಮೂಡಿಸಿದೆ. ಹಾಗೂ ಸಂತೋಷ ತಂದಿದೆ. ನಾನು ಎರಡು ಹೋರಿಗಳನ್ನು ಚೆನ್ನಾಗಿ ಬೆಳೆಸಿ ಕೃಷಿ ಚಟುವಟಿಕೆಗಳಿಗೆ ಅವುಗಳನ್ನು ತಯಾರು ಮಾಡುತ್ತೇನೆಂದು ತಿಳಿಸಿದ್ದಾರೆ.