ಹೆಬ್ಬಾಳ್ಕರ್ ಓಟಕ್ಕೆ ಸಾಹುಕಾರ್ ಫುಲ್ ಸ್ಟಾಪ್….?
ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ ಜಾರಕಿಹೊಳಿ ಸಹೋದರರು ಅಷ್ಟು ಸುಲಭವಾಗಿ ತಮ್ಮ ಅಖಾಡದಲ್ಲಿ ಮತ್ತೊಬ್ಬರಿಗೆ ಅವಕಾಶ ಕಲ್ಪಿಸುವರಲ್ಲ. ಚುನಾವಣೆ ಯಾವುದೇ ಇರಲಿ ಸಾಹುಕಾರರ ಆಶಿರ್ವಾದ ಇರಲೇಬೇಕು ಎಂಬುದಂತು ಸತ್ಯ.
ಹೌದು ಬರುವ ವಿಧಾನ ಪರಿಷತ್ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಆಯಾ ಪಕ್ಷದ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಲು ಹವಣಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರಿಷತ್ ಕುರ್ಚಿಮೇಲೆ ಕಣ್ಣಿಟ್ಟಿದ್ದು ತಮ್ಮ ಸಹೋದರ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಲು ಕಸರತ್ತು ಮುಂದುವರಿಸಿರುವ ಬೆನ್ನಲ್ಲೇ, ಜಾರಕಿಹೊಳಿ ಸಹೋದರು ಫುಲ್ ಸ್ಟಾಪ್ ಇಟ್ಟಿದ್ದು ಆಟದ ದಿಕ್ಕು ಸಂಪೂರ್ಣ ಬದಲಾಗಿದೆ.
ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಯ ಎರಡು ವಿಧಾನ ಪರಿಷತ್ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿಯ ಮಹಾಂತೇಶ ಕವಠಗಿಮಠ ಅವರ ಆಯ್ಕೆ ಬಹುತೇಕ ಫೈನಲ್ ಆಗಿದ್ದು ಇನ್ನುಳಿದ ಒಂದು ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಆದರೆ ಈ ಸ್ಥಾನದ ಮೇಲೆ ಅನೇಕ ಬಿಜೆಪಿ ಮುಖಂಡರು ಲಾಭಿ ನಡೆಸಿದ್ದರು ಸಧ್ಯ ಜಾರಕಿಹೊಳಿ ಮನೆತನದ ಕುಡಿ ಲಖನ್ ಅವರ ಹೆಸರನ್ನು ಬಹಿರಂಗವಾಗಿ ಪ್ರಸ್ತಾಪಿಸುವ ಮೂಲಕ ಬಾಲಚಂದ್ರ ಜಾರಕಿಹೊಳಿ ಮತ್ತೊಂದು ದಾಳ ಉರುಳಿಸಿದ್ದಾರೆ.
ಎರಡು ಪರಿಷತ್ ಸ್ಥಾನಕ್ಕೆ ಇತ್ತ ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸಹೋದರನಿಗೆ ಟಿಕೆಟ್ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ ಲಾಭಿ ಮುಂದುವರಿಸಿದ್ದಾರೆ. ಹೇಗಾದರು ಮಾಡಿ ಸಹೋದರರನ್ನು ಪರಿಷತ್ ಅಂಗಳಕ್ಕೆ ಕಳುಹಿಸಲು ಪಣ ತೊಟ್ಟಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರ ತೀಕ್ಷ್ಣ ಸಂದೇಶ ರಾಜಕೀಯ ವಲಯದಲ್ಲಿ ಹೊಸ ಗಾಳಿ ಎಬ್ಬಿಸಿದ್ದಂತು ಸತ್ಯ. ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಮನೆತನದ ಬೆಂಬಲವಿಲ್ಲದೆ ಗೆಲುವು ಸಾಧಿಸುವುದು ಕಷ್ಟಕರವಾಗುತ್ತದೆ ಎಂಬ ವಾದವು ಇದೆ.
ಈ ಕುರಿತು ಮಾತನಾಡಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಬೆಂಬಲಿಸಿ.ಜಾರಕಿಹೊಳಿ ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅದರಂತೆ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ ಇವರು ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಎರಡು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಒಟ್ಟಾರೆಯಾಗಿ ಪರಿಷತ್ ಕುರ್ಚಿ ಕನಸು ಕಂಡಿರುವ ಹೆಬ್ಬಾಳ್ಕರ್ ಸಹೋದರನ ಸ್ಪರ್ಧೆಯ ಮುಂಚೆಯೇ, ಜಾರಕಿಹೊಳಿ ಸಹೊದರರ ದಾಳ ಎಷ್ಡರಮಟ್ಟಿಗೆ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು. ನಿಖರ ಸುದ್ದಿಗಾಗಿ ನಮ್ಮ ಬೆಳಗಾವಿ ವಾಯ್ಸ್ ಬೆಂಬಲಿಸಿ.