Select Page

ಬದಲಾಗುತ್ತಾ ಕಾಗವಾಡ ರಾಜಕೀಯ ಸಮೀಕರಣ : ಕೈ ಬಿಟ್ಟು ಕಮಲ ಹಿಡಿಯುವರಾ ಕಾಗೆ…..?

ಬದಲಾಗುತ್ತಾ ಕಾಗವಾಡ ರಾಜಕೀಯ ಸಮೀಕರಣ : ಕೈ ಬಿಟ್ಟು ಕಮಲ ಹಿಡಿಯುವರಾ ಕಾಗೆ…..?

ಬೆಳಗಾವಿ : ರಾಜಕಾರಣ ಯಾವತ್ತೂ ನಿಂತ ನೀರಲ್ಲ. ಆಯಾ ಕಾಲಘಟ್ಟಕ್ಕೆ ಆಗುವ ಬಲಾವಣೆಗಳು ಹೊಸದಲ್ಲ. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಹಾಗೆಯೇ ಮಿತ್ರರು ಅಲ್ಲ ಎಂಬ ಅಲಿಖಿತ ನಿಯದಂತೆ, ಈ ಬಾರಿ ಕಾಗವಾಡ ರಾಜಕೀಯ ಸಮೀಕರಣ ಬದಲಾಗುವ ಲಕ್ಷಣ ಗೋಚರಿಸಿದರು ಆಶ್ಚರ್ಯವೆನಿಲ್ಲ.

ಹೌದು ಈ ಹಿಂದೆ ರಾಜು ಕಾಗೆ ಪ್ರತಿನಿಧಿಸುವ ಕಾಗವಾಡ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಿತ್ತು. ಮಾಜಿ ಸಚಿವ ಶ್ರೀಮಂತ ಪಾಟೀಲ್ ಕಾಂಗ್ರೆಸ್ ನಿಂದ ಗೆದ್ದು ಶಾಸಕರಾದರು. ಆದರೆ ಒಂದೇ ವರ್ಷದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧೆ ಮಾಡಿ ಸಚಿವರಾಗಿ ಸಧ್ಯ ಮಾಜಿ ಸಚಿವರಾಗಿದ್ದು ಇತಿಹಾಸ. ಆದರೆ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಗಮನಿಸಿದರೆ ಒಂದುಕಡೆ ಸ್ವಪಕ್ಷದ ಮೇಲೆ ಶ್ರೀಮಂತ ಪಾಟೀಲ್ ಸಿಟ್ಟಾಗಿದ್ದಾರೆ. ಹಾಗೆ ಮಾಜಿ ಶಾಸಕರ ಬೆಂಗಳೂರು ಭೇಟಿ ಗಮನಿಸಿದರೆ ಮತ್ತೊಮ್ಮೆ ರಾಜಕೀಯ ಸಮೀಕರಣ ಬದಲಾಗುವ ಲಕ್ಷಣ ಗೋಚರಿಸುತ್ತಿರುವುದು ಸ್ಪಷ್ಟ.

ರಾಜು ಕಾಗೆ ಮೊದಲಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದು 2000 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ನ  ಪೊಪಟ್ ಪಾಟೀಲ್ ಅರನ್ನು ಸೋಲಿಸಿದ್ದರು. ನಂತರ ಜನತಾದಳದಿಂದ 2004 ರಲ್ಲಿ ಸ್ಪರ್ಧೆ ಮಾಡಿ ಜಯಗಳಿಸಿದ್ದರು. ಅದಾದ ನಂತರ ಬಿಜೆಪಿ ಸೇರಿದ್ದ ಇವರು 2008 ಹಾಗೂ 2013 ರ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದರು.  ನಂತರ 2018 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಇವರು ಆಪರೇಷನ್ ಕಮಲದಿಂದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ನಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ಕಮಲ ಬಿಟ್ಟು ಕೈ ಹಿಡಿಯುವರಾ ಶ್ರೀಮಂತ : ಸಧ್ಯ ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಸ್ವಪಕ್ಷದ ವಿರುದ್ಧ ಮುನಿಸಿಕೊಂಡಿರುವುದಂತು ಸತ್ಯ. ಆಪರೇಷನ್ ಕಮಲದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಇವರು ಸಚಿವರಾಗಿ ಕೆಲಸ ಮಾಡಿದ್ದರು, ಆದರೆ ಬೊಮ್ಮಾಯಿ ಸರ್ಕಾರದಲ್ಲಿ ಸಚಿವಸ್ಥಾನ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೇ ಆಪ್ತ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಠಳ್ಳಿ ಅವರಿಗೂ ಸಚಿವಸ್ಥಾನ ಇಲ್ಲಿಯವರೆಗೆ ಸಿಕ್ಕಿಲ್ಲ. ಈ ಎಲ್ಲಾ ಕಾರಣಕ್ಕೆ ಶಾಸಕ ಶ್ರೀಮಂತ ಪಾಟೀಲ್ ತಮ್ಮ ಆಪ್ತರ ಬಳಿ ಪಕ್ಷದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು ಇದೆ.

ಕೈ ಪಕ್ಷದಲ್ಲಿ ಅಸ್ತಿತ್ವಕ್ಕಾಗಿ ಕಾಗೆ ಪರದಾಟ : ಬಿಜೆಪಿ ಪಕ್ಷದಲ್ಲಿ ಮುಂಚೂಣಿ ನಾಯಕರಾಗಿದ್ದ ರಾಜು ಕಾಗೆ ಅವರನ್ನು ಕಾಂಗ್ರೆಸ್ ಅಷ್ಟೊಂದು ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ. ಜೊತೆಗೆ ಪಕ್ಷ ಸಂಘಟನೆಯಲ್ಲಿ ಅವರಿಗಿರುವ ಅನುಭವವನ್ನು ಕಾಂಗ್ರೆಸ್ ಲಾಭ ಮಾಡಿಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಈ ಎಲ್ಲಾ ಕಾರಣಕ್ಕಾಗಿ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿರುವುದಂತು ಸತ್ಯ. ಈ ಎಲ್ಲಾ ಬೆಳವಣಿಗೆಗಳು ಮುಂದೆ ಮಹತ್ವದ ಬದಲಾವಣೆಗೆ ದಾರಿ ಆಗುತ್ತವೆಯಾ ಎಂದು ಕಾದು ನೋಡಬೇಕು.

Advertisement

Leave a reply

Your email address will not be published. Required fields are marked *

error: Content is protected !!