Select Page

ಬೀಜೋತ್ಪಾದನಾ ಕೇಂದ್ರ ಉದ್ಘಾಟಿಸಿದ ಸಚಿವ ಬಿ.ಸಿ. ಪಾಟೀಲ್

ಬೀಜೋತ್ಪಾದನಾ ಕೇಂದ್ರ ಉದ್ಘಾಟಿಸಿದ ಸಚಿವ ಬಿ.ಸಿ. ಪಾಟೀಲ್

ಸವದತ್ತಿ : ಸ್ಥಳೀಯ ಕೃಷಿ ಇಲಾಖೆಯ  ಬೀಜೋತ್ಪಾದನಾ ಕೇಂದ್ರದ ಬಲವರ್ಧನೆ ಕಾಮಗಾರಿಗೆ ಸಚಿವ ಬಿ.ಸಿ. ಪಾಟೀಲ ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅವರಿಂದ ಭೂಮಿ ಪೂಜೆ ನೆರವೇರಿಸಿಲಾಯಿತು.

ಇದೇ ವೇಳೆ ರೈತ ಸಂಘಟನೆಗಳಿಂದ ಹೋಬಳಿ ತಾರತಮ್ಯದಿಂದ ರೈತರು ಅನುಭವಿಸುವ ಸಮಸ್ಯೆ, ಗೋವಿನ ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ, ಹೆಸರು, ಉದ್ದು, ಗೋವಿನಜೋಳ, ಈರುಳ್ಳಿ, ಹತ್ತಿ ಬೆಳೆಗಳಿಗೆ ವಿಶೇಷ ಪ್ಯಾಕೇಜ ಅಡಿ ಸೂಕ್ತ ಬೆಳೆ ಪರಿಹಾರ ನಿಗದಿಪಡಿಸಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ಪಂದಿಸಿದ ಉಪಸಭಾಧ್ಯಕ್ಷರು ಹಾಗೂ ಸಚಿವರು ರೈತಪರ ಸರಕಾರ ಇದಾಗಿದ್ದು, ರೈತರ ಬೇಡಿಕೆಗಳಲ್ಲಿನ ಕೆಲ ಅಂಶಗಳನ್ನು ಈಗಾಗಲೇ ಅನುಕೂಲ ಕಲ್ಪಿಸಿಲಾಗಿದೆ. ಉಳಿದವುಗಳನ್ನು ಕೂಲಂಕುಶವಾಗಿ ಚರ್ಚಿಸಿ ಶೀಘ್ರದಲ್ಲಿ ಸೌಲಭ್ಯ ಒದಗಿಸಲಾಗುವದು ಎಂದರು.

ಕಾರ್ಯಕ್ರಮದಲ್ಲಿ ಯುಪಿಎಸ್‌ಸಿಯಲ್ಲಿ 583 ನೇ ರ‍್ಯಾಂಕ್ ಪಡೆದ ಕರೀಕಟ್ಟಿ ಗ್ರಾಮದ ಶಾಕೀರಅಹ್ಮದ ಅಕ್ಬರಸಾಬ ತೊಂಡೇಖಾನ ಇವರನ್ನು ಸಚಿವ ಮತ್ತು ವಿಧಾನಸಭಾ ಉಪಸಭಾಧ್ಯಕ್ಷರಿಂದ ಸನ್ಮಾನಿಸಲಾಯಿತು.

ಈ ವೇಳೆ ತಾ.ಪಂ. ಇಒ ಯಶವಂತಕುಮಾರ, ತಹಶೀಲ್ದಾರ ಪ್ರಶಾಂತ ಪಾಟೀಲ, ಎಮ್.ವಿ. ಗುಂಡಪ್ಪಗೋಳ, ನಿಂಗಪ್ಪ ಮೀಶಿ, ದೀಪಕ ಜಾನ್ವೇಕರ, ಜಂಟಿ ನಿರ್ದೇಶಕ ಎಸ್.ಎಸ್. ಪಾಟೀಲ, ಎಚ್.ಡಿ. ಕೋಳೇಕರ, ಕೆ.ಎನ್. ಮಹಾರಡ್ಡಿ, ಜಗದೀಶ ಕೌಜಗೇರಿ, ಬಸವರಾಜ ಕಾರದಗಿ ಹಾಗೂ ಪ್ರಮುಖರು ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!