ಸಮಸ್ತ ವೀರಶೈವ ಲಿಂಗಾಯತರಿಗೆ 2-A ಮೀಸಲಾತಿ ಸಿಗಬೇಕು : ಸಚಿವ ಮುರುಗೇಶ ನಿರಾಣಿ
ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2-A ಮೀಸಲಾತಿ ನೀಡಬೇಕೆಂಬ ಕೂಗು ಬಹಳ ದಿನಗಳಿಂದ ಇದೆ. ಸಮಸ್ತ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಆಶಯ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ವೀರಶೈವ ಸಮುದಾಯದಲ್ಲಿ ಬಹಳಷ್ಟು ಒಳ ಪಂಗಡಗಳಿವೆ. ಪಂಚಮಸಾಲಿ ಸಮುದಾಯಕ್ಕೆ ಹೋರಾಟ ಮಾಡುವ ಶಕ್ತಿ ಇದೆ. ಆದರೆ ಬಹಳಷ್ಟು ಸಮುದಾಯಗಳಿಗೆ ಆ ಶಕ್ತಿ ಇಲ್ಲ. ಈ ಉದ್ದೇಶದಿಂದ ಸಂಪೂರ್ಣ ವೀರಶೈವ ಲಿಂಗಾಯತ ಸಮುದಾಯಗಳು 2 – A ಮೀಸಲಾತಿ ಸಿಗಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಸಚಿವರಾದ ನಂತರ ನಿರಾಣಿ ಪಂಚಮಸಾಲಿ ಹೋರಾಟದಿಂದ ದೂರ ಉಳಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಇವರು. ಪಂಚಮಸಾಲಿ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ. ನಾನು ಸಚಿವನಿಲ್ಲದ ಸಂದರ್ಭದಲ್ಲಿ ಮಾಡಿದ್ದ ಹೋರಾಟವೇ ಬೇರೆ. ಸಧ್ಯ ಸರ್ಕಾರದ ಭಾಗವಾಗಿ ಮೀಸಲಾತಿ ಹೋರಾಟ ಮುಂದುವರಿಸಿದ್ದೇನೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳುವ ಬರವಸೆ ಇದೆ. ಕೂಡಲಸಂಗಮ ಶ್ರೀಗಳು ನಮ್ಮ ಗುರುಗಳು ಅವರ ಆಶಿರ್ವಾದ ನಮಗೆ ಸದಾ ಇದ್ದೇ ಇರುತ್ತದೆ. ನನ್ನ ವಿರುದ್ಧ ಯಾರೂ ಹೇಳಿಕೆ ನೀಡಿಲ್ಲ. ಈ ಕುರಿತು ನಾನು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುದಿಲ್ಲ ಎಂದರು.