
ಕೋರ್ಟ್ ಮುಂದೆಯೇ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪತಿ

ಬೆಳಗಾವಿ : ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಪತಿಯಿಂದ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪ ಗ್ರಾಮದ ಮಾಜಿ ಸೈನಿಕ ಶಿವಪ್ಪ ನಿಂಗಪ್ಪ ಅಡಕಿ (35)ಯಿಂದ ಪತ್ನಿ ಜಯಮಾಲಾ (33)ಮೇಲೆ ಹಲ್ಲೆ ಮಾಡಿದ್ದಾರೆ. ಬ್ಯಾಂಕ್ ನಲ್ಲಿರುವ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ
ಪತ್ನಿ ಜಯಮಾಲಾ ತವರುಮನೆ ಹುಬ್ಬಳ್ಳಿ ತಾಲೂಕಿನ ವರೂರದಲ್ಲಿ ಇರುತ್ತಿದ್ದಳು. ಕೋರ್ಟ್ ವಿಚಾರಣೆಗೆಂದು ಬೈಲಹೊಂಗಲಕ್ಕೆ ಪತ್ನಿ ಜಯಮಾಲಾ ಆಗಮಿಸಿದ ಸಂದರ್ಭದಲ್ಲಿ ಪತಿ ಹಲ್ಲೆ ನಡೆಸಿದ್ದಾನೆ.
ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿದ್ದು. ತನಿಖೆ ಮುಂದುವರಿಸಿದ್ದಾರೆ.