Select Page

Advertisement

ನಿಸ್ವಾರ್ಥ ಜನಸೇವಕನಿಗೆ ಹುಟ್ಟು ಹಬ್ಬದ ಶುಭಾಶಯ : ಪಾರ್ಶ್ವನಾಥ ಕೊಕಟನೂರ

ನಿಸ್ವಾರ್ಥ ಜನಸೇವಕನಿಗೆ ಹುಟ್ಟು ಹಬ್ಬದ ಶುಭಾಶಯ : ಪಾರ್ಶ್ವನಾಥ ಕೊಕಟನೂರ

ಮಹಾಂತೇಶ ವಕ್ಕುಂದ ಇವರು ಕೇವಲ ನನಗೆ ಸ್ನೇಹಿತರಲ್ಲ. ಬದುಕಿನ ಪ್ರತಿ ಗಳಿಗೆಯಲ್ಲಿ ತಪ್ಪಿದ್ದಾಗ ತಿದ್ದಿ ಬುದ್ದಿ ಹೇಳುವ ಗುರು. ಜೊತೆಗೆ ಬದುಕಿನ ಮೌಲ್ಯಗಳನ್ನು ಸ್ವತಃ ಅನುಸರಿಸಿ ಮತ್ತೊಬ್ಬರಿಗೆ ಹೇಳುವ ಮಾತೃ ಹೃದಯಿ.‌ ಇಂತಹ ಗೆಳೆಯನಿಗೆ ಇಂದು ಹುಟ್ಟು ಹಬ್ಬದ ಶುಭಾಶಯ ತಿಳಿಸುವುದು ಹೆಮ್ಮೆಯ ವಿಷಯ.

ಕೈತುಂಬ ಸಂಬಳವಿದ್ದಾಗ ಸಾಮಾನ್ಯ ಮನುಷ್ಯರು ಆರಾಮದಾಯಕ ಜೀವನಕ್ಕೆ ಮೊರೆ ಹೋಗುತ್ತಾರೆ. ಆದರೆ ಸ್ನೇಹಿತ ಮಹಾಂತೇಶ ಮಾತ್ರ ಸಮಾಜದ ಜನರ ನೋವಿಗೆ ಸ್ಪಂದಿಸಿ ಅವರ ಕಷ್ಟಕ್ಕೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಜನರಿಗೆ ಯಾವುದೇ ಸಂದರ್ಭದಲ್ಲಿ ನೆರವು ಕೇಳಿದರೆ ಇವರು ಕೈಲಾಗಲ್ಲ ಎಂಬ ಒಂದು ನಿದರ್ಶನ ಇಲ್ಲ.

ಕಳೆದ 2019 ರಲ್ಲಿ ಬೆಳಗಾವಿಯಲ್ಲಿ ಉಂಟಾದ ಪ್ರವಾಹ. 2020 ಹಾಗೂ 21 ರಲ್ಲಿ ಉಂಟಾದ ಕೊರೊನಾ ಲಾಕ್ ಡೌನ್ ನಿಂದ ಜನ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರ ನೆರವಿಗೆ ನಿಂತವರು ನಮ್ಮ ಮಹಾಂತೇಶ. ‌ಹಸಿದವರಿಗೆ ಮೂರು ಹೊತ್ತು ಊಟ ನೀಡಿ ಅವರ ಹೊಟ್ಟೆ ತುಂಬಿಸಿದ ಮಾಹಾಂತೇಶ್ ಅವರನ್ನು ಎಷ್ಟು ಅಭಿನಂದಿಸಿದರು ಕಡಿಮೆ. ‌

ಅಷ್ಟೇ ಅಲ್ಲದೆ ಸ್ವಂತ ಹಣದಲ್ಲಿ ಕೊವಿಡ್ ರೋಗಿಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಿ ಅದೆಷ್ಟೋ ಬಡ ಜೀವಗಳ ಪ್ರಾಣ ಉಳಿಸಿದರು. ಇಂತಹ ಒಬ್ಬ ಸ್ನೇಹಿತ ನಮ್ಮ ಮಧ್ಯೆ ಇದ್ದಾರೆ ಎಂದರೆ ಅದೇ ನಮಗೆ ದೊಡ್ಡ ಹೆಮ್ಮೆ.‌ ದೇವರು ಅವರನ್ನು ಸುಖದಿಂದ ನೂರು ವರ್ಷ ಆಯುಷ್ಯ ಕೊಟ್ಟು ಹಾರೈಸಲಿ. ಅವರ ಸಾಮಾಜಿಕ ಕಾರ್ಯ ಹೀಗೆ ಮುಂದುವರೆಯಲಿ.

ಪಾರ್ಶ್ವನಾಥ ಕೊಕಟನೂರ
ಯುವ ಉದ್ಯಮಿಗಳು ಬೆಳಗಾವಿ

Advertisement

Leave a reply

Your email address will not be published. Required fields are marked *

error: Content is protected !!