ಸಾಲಗಾರ ಗಂಡನನ್ನು ಕೊಲೆ ಮಾಡಿದ್ದ ಪತ್ನಿ & ಅತ್ತೆ ಅರೆಸ್ಟ್
ಬೆಳಗಾವಿ : ಮೈತುಂಬ ಸಾಲ ಮಾಡಿಕೊಂಡಿದ್ದ ಗಂಡನನ್ನು ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಿದ್ದ ಆರೋಪದಲ್ಲಿ ಪತ್ನಿ ಹಾಗೂ ಮೃತನ ಅತ್ತೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ತಾಲೂಕಿನ ಪಿರನವಾಡಿ ನಿವಾಸಿ ವಿನಾಯಕ ಜಾಧವ್ (48) ಎಂಬಾತನನ್ನು ಕಳೆದ ಜುಲೈ 29 ರಂದು ರಾತ್ರಿ ಪತ್ನಿ ರೇಣುಕಾ ಹಾಗೂ ಆಕೆಯ ತಾಯಿ ಶೋಭಾ ಭೀಕರವಾಗಿ ಹತ್ಯೆ ಮಾಡಿದ್ದಲ್ಲದೆ, ಕುಡಿದ ಅಮಲಿನಲ್ಲಿ ಬಿದ್ದು ಸಾವಣಪ್ಪಿದ್ದಾನೆ ಎಂದು ಬಿಂಬಿಸಿ ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿ ಹಾಕಲಾಗಿತ್ತು. ಆದರೆ ಮೃತ ವ್ಯಕ್ತಿಯ ಸಹೋದರ ಅರುಣ್ ಎಂಬುವವರು ಕೊಲೆ ಶಂಕೆ ವ್ಯಕ್ತಪಡಿಸಿ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.
ವಿನಾಯಕ ಜಾಧವ್ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಇದು ಸಹಜ ಸಾವಲ್ಲ ವ್ಯವಸ್ಥಿತ ಕೊಲೆ ಎಂಬುದು ತಿಳಿದುಬಂದಿದೆ. ಉದ್ಯಮಬಾಗದಲ್ಲಿ ಸ್ವಂತ ಉದ್ಯೋಗ ಹೊಂದಿದ್ದ ಮೃತ ವ್ಯಕ್ತಿ ಸಾಲದ ಸುಳಿಗೆ ಸಿಲುಕಿದ್ದ. ಜೊತೆಗೆ ಸಾಲಕ್ಕೆ ಸ್ವಂತ ಮನೆಯನ್ನು ಅಡವಿಟ್ಟು ಮೂರು ವರ್ಷ ಮನೆ ಬಿಟ್ಟು ಹೋಗುದ್ದ.
ಪತ್ನಿ ರೇಣುಕಾ ಜೊತೆ ಕುಡಿದು ಗಲಾಟೆ ಮಾಡುತ್ತಿದ್ದ ಹಿನ್ನಲೆಯಲ್ಲಿ ಜುಲೈ 29 ರಂದು ರಾತ್ರಿ ಕುಡಿದು ಮನೆಗೆ ಬಂದ ಸಂದರ್ಭದಲ್ಲಿ ವಿನಾಯಕ ಜಾಧವ್ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆಮ ಸಧ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ
ರೇಣುಕಾ ಹಾಗೂ ಆಕೆಯ ತಾಯಿ ಶೋಭಾನನ್ನು ಪೊಲೀಸರು ಬಂಧಿಸಿದ್ದಾರೆ.