Select Page

Advertisement

ಮೈಸೂರು ಆಯ್ತು ಈಗ ಬೆಳಗಾವಿಯಲ್ಲಿಯೂ ದೇವಸ್ಥಾನ ತೆರವು : ಹಾಗಾದರೆ ಎಷ್ಟು ದೇವಸ್ಥಾನ ನೆಲಸಮ..?

ಮೈಸೂರು ಆಯ್ತು ಈಗ ಬೆಳಗಾವಿಯಲ್ಲಿಯೂ ದೇವಸ್ಥಾನ ತೆರವು : ಹಾಗಾದರೆ ಎಷ್ಟು ದೇವಸ್ಥಾನ ನೆಲಸಮ..?

ಬೆಳಗಾವಿ : ಮೈಸೂರಿನಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ ಧಾರ್ಮಿಕ ಕೇಂದ್ರಗಳ ತೆರವು ಕಾರ್ಯಾಚರಣೆ ವಿವಾದದ ಬೆನ್ನಲ್ಲೇ ಈಗ ಬೆಳಗಾವಿಯಲ್ಲಿಯೂ ದೇವಸ್ಥಾನ ತೆರವು ಕಾರ್ಯಾಚರಣೆ ನಡೆಸುವ ಸುಳಿವು ಸಿಕ್ಕಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವಂತದ್ದು 46 ಇದ್ದು, ಇದು  ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂಥದ್ದು. ಈ ಪೈಕಿ 17 ತೆರೆವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ. 39 ದೇವಸ್ಥಾನಗಳನ್ನು ತೆರವು ಮಾಡಬೇಕಿದೆ. ಅಲ್ಲದೆ ನಿಪ್ಪಾಣಿಯಲ್ಲಿ ತಾಲೂಕಿನಲ್ಲಿ  ನಾಲ್ಕು ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗಿದೆ. ಆದರೆ ಯಾವುದೇ ರೀತಿ ತೊಂದರೆಯಾಗದಂತೆ ತೆರವುಗೊಳಿಸಲಾಗುವುದು ಎಂದರು.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಾಗೂ ಗಣೇಶೋತ್ಸವ ಇರುವುದರಿಂದ ಕೆಲ ದೇವಸ್ಥಾನಗಳನ್ನು ತೆರವುಗೊಳಿಸಿಲ್ಲ. ಗಣೇಶೋತ್ಸವ ಮುಗಿದ ಬಳಿಕ ದೇವಸ್ಥಾನದ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಉಳಿದ 39 ದೇವಸ್ಥಾನವನ್ನು ಯಾವುದೇ ತೊಂದರೆ ಇಲ್ಲದೆ ತೆರವುಗೊಳಿಸಲಾಗುವುದು ಎಂದರು.

ನಗರ ಪ್ರದೇಶದಲ್ಲಿ ಕೆಲವರು ತಮ್ಮ ಕಟ್ಟಡ ತೆರವುಗೊಳಿಸಬಾರದು ಎಂದು ಹೇಳಿ ದೇವಸ್ಥಾನ ಕಟ್ಟಿಕೊಂಡಿದ್ದಾರೆ. ಈ ಕುರಿತು ಪಾಲಿಕೆಯ ಅಧಿಕಾರಿಗಳು ವಾರ್ಡುಗಳಲ್ಲಿ ವರದಿ ಸಿದ್ದ ಪಡಿಸಿದ್ದಾರೆ. ಅದರಂತೆ ಅಂಥ ದೇವಸ್ಥಾನಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.

Advertisement

Leave a reply

Your email address will not be published. Required fields are marked *