Select Page

ವೀರಭದ್ರೇಶ್ವರರ ಇತಿಹಾಸ ಎಲ್ಲೆಡೆ ಪಸರಿಸಲಿ : ರವಿ ಕೊಟಾರಗಸ್ತಿ

ವೀರಭದ್ರೇಶ್ವರರ ಇತಿಹಾಸ ಎಲ್ಲೆಡೆ  ಪಸರಿಸಲಿ : ರವಿ ಕೊಟಾರಗಸ್ತಿ

ಬೆಳಗಾವಿ : ವೀರಭದ್ರೇಶ್ವರರ ಇತಿಹಾಸವನ್ನು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಲಿಸಿಕೊಡುವುದು ಅಗತ್ಯವಿದೆ ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನದ ಆಡಳಿತಾಧಿಕಾರಿ ರವಿ ಕೊಟಾರಗಸ್ತಿ ಹೇಳಿದರು.

ಮಂಗಳವಾರ ನಗರದ ಪೊಲೀಸ್ ಹೆಡ್ ಕ್ವಾರ್ಟಸ್ ನಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ವೀರ ಮತ್ತು ಭದ್ರ , ಶೌರ್ಯ ಹಾಗೂ ನಮ್ಮನ್ನು ರಕ್ಷಣೆ ಮಾಡುವ ವಿಶಿಷ್ಠವಾದ ರೂಪ ಮಹಾನ್ ಪುರುಷ ವೀರಭದ್ರೇಶ್ವರ ಎಂದ ಅವರು ಮುಂದಿನ ದಿನಗಳಲ್ಲಿ ನಮ್ಮಗೆಲ್ಲರಿಗೂ ಶಕ್ತಿಯಾಗಿ ವೀರಭದ್ರೇಶ್ವರನ ಆಶೀರ್ವಾದ ಸಿಗಲಿ ಎಂದು ಹೇಳಿದರು‌

ಶಿವನ ಆರಾಧಕ, ಶಿವನ ಸಂಸ್ಕೃತಿಯ ಮೂಲ ಆರಾಧಕ ವೀರಭದ್ರೇಶ್ವರ ಜಯಂತಿಯನ್ನು ಇಡೀ ರಾಜ್ಯಾದ್ಯಂತ ಆಚರಿಸುತ್ತಿರುವುದು ಅಭಿಮಾನದ ಸಂಗತಿ. ಪಂಚಪೀಠಗಳಾದ ರಂಭಾಪುರಿ ಪೀಠ, ಕೇದಾರ ಪೀಠ ಹಾಗೂ ಹುಕ್ಕೇರಿ ಹಿರೇಮಠದ ಶ್ರೀಗಳ ವಿಶೇಷ ಆಸಕ್ತಿಯಿಂದ ವೀರಭದ್ರೇಶ್ವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಎಲ್ಲ ಕಡೆ ವೀರಭದ್ರೇಶ್ವರ ಜಯಂತಿಯನ್ನು ಆಚರಣೆ ಮಾಡುವಂತಾಗಲಿ ಎಂದು ಹೇಳಿದರು.

ಮಹಾಂತೇಶ ಶಾಸ್ತ್ರೀಗಳು ಮಾತನಾಡಿ, ದೇಶಾದ್ಯಂತ ವಿಶೇಷವಾಗಿ ನಗರ, ಗ್ರಾಮೀಣ ಭಾಗದಲ್ಲಿ ವೀರಭದ್ರೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದಕ್ಕೆ ಕರೆ ನೀಡಿದವರು ರಂಭಾಪುರಿ ಪೀಠದ ಶ್ರೀಗಳು ಚಾಲನೆ ನೀಡಿದರು‌. ಅಲ್ಲದೆ ಹುಕ್ಕೇರಿ ‌ಹಿರೇಮಠದ ಶ್ರೀಗಳ ನೇತೃತ್ವದಲ್ಲಿ ಈ ಜಯಂತಿಯನ್ನು ಮಾಡಲಾಗುತ್ತಿದೆ ಎಂದರು.

ವೀರ ಆಂಜನೇಯ ಸ್ವಾಮೀಗೆ ಲಿಂಗಧೀಕ್ಷೆ ಕೊಟ್ಟಿರುವ ಅಪರೂಪದ ಸ್ವಾಮೀಜಿ ಎಂದರೆ ವೀರಭದ್ರೇಶ್ವರ. ವೀರಶೈವ ಧರ್ಮದ ಗೋತ್ರ ಪುರುಷನಾಗಿರುವ ವೀರಭದ್ರೇಶ್ವರ ‌ಜಯಂತಿಯನ್ನು ಮುಂಬರುವ ದಿನಗಳಲ್ಲಿ ಎಲ್ಲ ವೀರಭದ್ರೇಶ್ವರ ದೇವಸ್ಥಾನ, ಎಲ್ಲರ ಮನೆಯಲ್ಲಿ ಮಾಡುವಂತಾಗಬೇಕೆಂದು ಕರೆ ನೀಡಿದರು.

ಸಂಗಯ್ಯ ಶಾಸ್ತ್ರೀ, ಶಂಕರಯ್ಯ ಹಿರೇಮಠ, ಚಂದ್ರಶೇಖರಯ್ಯ ಸಾಲಿಮಠ ಸವಡಿ, ಡಿಎಆರ್ ಆಪಿಐ ಸಿಪಿಐ ಎ.ಎಸ್.ವಾರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!