ಅಥಣಿ : ಬಾಲದಂತೆ ಬೆಳೆದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಅಥಣಿ : ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ಚುನಾವಣೆ ಟಿಕೆಟ್ ಪಡೆಯಲು ಅಭ್ಯರ್ಥಿಗಳು ಎರಡು ಲಕ್ಷ ಹಣದ ಜೊತೆಗೆ ಕೆಪಿಸಿಸಿಗೆ ಫಾರ್ಮ್ ಸಲ್ಲಿಸಲು ಸೂಚಿಸಿತ್ತು. ಇದಕ್ಕೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಅಥಣಿ ತಾಲೂಕಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಾಲದಂತೆ ಬೆಳೆದಿದೆ.
ಹೌದು ಅಥಣಿ ತಾಲೂಕಿನಲ್ಲಿ ಈ ಹಿಂದೆ ಕಾಂಗ್ರೆಸ್ ನಿಂದ ಗೆದ್ದಿದ್ದ ಮಹೇಶ್ ಕುಮಠಳ್ಳಿ ಸ್ವ ಪಕ್ಷದ ಕೈಯಲ್ಲಿ ಚೊಂಬು ಕೊಟ್ಟು ಕಮಲ ಹಿಡಿದಿದ್ದರು. ಈ ಸಂಕಟದಿಂದ ಹೊರಬರಲು ಕಾಂಗ್ರೆಸ್ ನಾನಾ ಬಗೆಯ ಕಸರತ್ತು ನಡೆಸಿದ್ದರು ಯಾವುದೇ ಪರಿಣಾಮ ಬೀರಲಿಲ್ಲ. ಕೊನೆಗೆ ಸಾರ್ವಜನಿಕ ಸಂಪರ್ಕ ಇರದ ಒಬ್ಬರಿಗೆ ಟಿಕೆಟ್ ನೀಡಿದ್ದೆ ಪರಿಣಾಮ ಕುಮಠಳ್ಳಿ ಐತಿಹಾಸಿಕ ಗೆಲುವು ಸಾಧಿಸುವಂತಾಗಿತ್ತು.
ಈಗಾಗಲೇ ಅಥಣಿ ತಾಲೂಕಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆದಿದ್ದು ಸುಮಾರು ಒಂಬತ್ತು ಜನ ಟಿಕೆಟ್ ಗಾಗಿ ಫಾರ್ಮ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದ ಒಬ್ಬರು ಸೇರಿದಂತೆ ಹಲವರು ಇದ್ದಾರೆ.
೦೧ ) ಸದಾಶಿವ ಬುಟಾಳಿ, ೦೨ ) ದರೆಪ್ಪ ಠಕ್ಕಣ್ಣವರ
೦೩ ) ಬಸವರಾಜ ಬುಟಾಳಿ, ೦೪ )ಶಿವಾನಂದ ಗುಡ್ಡಾಪುರ ೦೫ ) ಗಜಾನನ ಮಂಗಸೂಳಿ, ೦೬ ) ಶ್ರೀಕಾಂತ್ ಪುಜಾರಿ, ೦೭ ) ಸತ್ಯಪ್ಪ ಬಾಗ್ಯನ್ನವರ, ೦೮ ) ಅತ್ಲಂ ನಾಲಬಂದ, ೦೯ ) ಸುನೀಲ್ ಸಂಕ,
ಒಟ್ಟಿನಲ್ಲಿ ಒಂಬತ್ತು ಜನ ಟಿಕೆಟ್ ಆಕಾಂಕ್ಷಿಗಳಾಗಿ ಕೆಪಿಸಿಸಿಗೆ ಫಾರ್ಮ್ ಕಳುಹಿಸಿದ್ದು, ಹೈಕಮಾಂಡ್ ಯಾರಿಗೆ ಮನೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕು.