
ಹೆದ್ದಾರಿ ಪಕ್ಕ ಗಂಡು ಶಿಶು ಎಸೆದು ಪರಾರಿಯಾದ ದುರುಳರು – ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ

ಬೆಳಗಾವಿ : ನಿಪ್ಪಾಣಿ ಹೊರವಲಯದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ, ಬ್ಯಾಗ್ ನಲ್ಲಿ ನವಜಾತ ಶಿಶುವನ್ನು ಎಸೆದ ಘಟನೆ ಬೆಳಕಿಗೆ ಬಂದಿದೆ.
ಗಂಡು ಶಿಶುವನ್ನು ಚೀಲದಲ್ಲಿ ಹಾಕಿ ಎಸೆದಿದ್ದು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ನವಜಾತ ಶಿಶುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನೂ ನವಜಾತ ಶಿಶುವಿನ ಪೋಷಕರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದು, ಈ ಕುರಿತು ತನಿಖೆ ಕೈಗೊಳ್ಳಲಾಗಿದೆ.