VIDEO – ಪಿಸ್ತೂಲ್ ಹಣೆಗಿಟ್ಟು ಹಾಸ್ಯ ಕಲಾವಿದ ರಾಜು ತಾಳಿಕೋಟೆ ಮೇಲೆ ಹಲ್ಲೆ
ವಿಜಯಪುರ : ಹಣೆಗೆ ಪಿಸ್ತೂಲ್ ಇಟ್ಟು ಸಂಬಂಧಿಕರಿಂದಲೇ ಹಾಸ್ಯ ಕಲಾವಿದ ರಾಜು ತಾಳಿಕೋಟೆ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದು, ಸಧ್ಯ ಇವರು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಖ್ಯಾತ ಹಾಸ್ಯನಟ ರಾಜು ತಾಳಿಕೋಟಿಯಿಂದ ಅಳಿಯನ ಪತ್ನಿಯ ಮೇಲೆ ಹಲ್ಲೆ ಆರೋಪ. ಕೌಟುಂಬಿಕ ಕಲಹ ಹಿನ್ನೆಲೆ ಅಳಿಯನ ಪತ್ನಿ ಮೇಲೆ ಹಲ್ಲೆ ನಡೆಸಿದ್ರಾ ರಾಜೂ ತಾಳಿಕೋಟಿ ಎಂಬ ಪ್ರಶ್ನೆ ಮೂಡಿದೆ. ಅಳಿಯ ಫಯಾಜ್ ಕರಜಗಿಯ ಪರವಾಗಿ ನಿಂತು ಮಹಿಳೆ ಮೇಲೆ ದೌರ್ಜನ್ಯ ಆರೋಪ ಮಾಡಿದ್ದು ಸನಾ ಕರಜಗಿ ಎಂಬ ಮಹಿಳೆ ಮೇಲೆ ಹಲ್ಲೆಮಾಡಿ, ಬಲವಂತವಾಗಿ ವಿಷ ಕುಡಿಸಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ. ಸಧ್ಯ ಸನಾ ಕರಜಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೀಡಿಯೋ ನೋಡಲು ಈ ಲಿಂಕ್ ಒತ್ತಿ https://www.facebook.com/108396434841799/posts/127704816244294/
ಇನ್ನೊಂದು ಕಡೆ ರಾಜು ತಾಳಿಕೋಟೆ ಸಹ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ತಮಗೂ ಜೀವ ಬೆದರಿಕೆ ಇದೆ ಎಂದಿದ್ದಾರೆ. ಅಕ್ಕನ ಮಗನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ಈ ಘಟನೆಗೆ ಮೂಲ ಕಾರಣ.