ಬೆಳಗಾವಿಯ ರಾಮತೀರ್ಥ ನಗರದಲ್ಲಿ ವೀರಭದ್ರೇಶ್ವರ ಜಯಂತಿ ಆಚರಣೆ
ಬೆಳಗಾವಿ : ನಾಡಿನಾದ್ಯಂತ ಸಡಗರದಿಂದ ಆಚರಿಸಲಾಗುತ್ತಿರುವ ವೀರಭದ್ರೇಶ್ವರ ಜಯಂತಿಯನ್ನು ಇಂದು ಬೆಳಗಾವಿಯ ರಾಮತೀರ್ಥ ನಗರದಲ್ಲಿ ಆಚರಿಸಲಾಯಿತು.
ವೀರಭದ್ರೇಶ್ವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಶ್ರೀ ವೇಧಮೂರ್ತಿ ಪವನಕುಮಾರ್ ಹಿರೇಮಠ ಶಾಸ್ತ್ರಿ. ನಾಡಿನಾದ್ಯಂತ ಅತ್ಯಂತ ಸಡಗರದಿಂದ ವೀರಭದ್ರೇಶ್ವರ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ. ಷ ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಶೈಲ ಶಾಸ್ತ್ರಿಗಳು, ಶಂಕರಯ್ಯ ಶಾಸ್ತ್ರಿಗಳು, ಶಿವಾನಂದ ಶಾಸ್ತ್ರಿಗಳು, ಬಸವರಾಜ ಶಾಸ್ತ್ರಿಗಳು ಹಾಗೂ ಶ್ರೀ ವೀರಭದ್ರೇಶ್ವರ ಕಮಿಟಿಯ ಅಧ್ಯಕ್ಷರಾದ ಈರಯ್ಯ ಸ್ವಾಮಿಜಿ ಸೇರಿದಂತೆ ಅಪಾರ ಭಕ್ತರು ಉಪಸ್ಥಿತರಿದ್ದರು.