ಶಶಿಕಾಂತ ಪಡಸಲಗಿ ಪೂಜ್ಯರ ನೇತೃತ್ವದಲ್ಲಿ ಸೆ. 20 ರಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಮುತ್ತಿಗೆ….!
ಅಥಣಿ : ಕಬ್ಬಿನ ಬಾಕಿ ಬಿಲ್ ನೀಡುವಂತೆ ಆಗ್ರಹಿಸಿ ಬರುವ ಸೆ.20 ರಂದು ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷರಾದ ಪೂಜ್ಯ ಶಶಿಕಾಂತ ಪಡಸಲಗಿ ಹೇಳಿದರು.
ಈ ಹಿಂದೆ ಬಾಕಿ ಉಳಿದಿದ್ದ ಕಬ್ಬಿನ ಬಿಲ್ ಪಾವತಿಸಿ ಎಂದು ನಮ್ಮ ಸಂಘದ ವತಿಯಿಂದ ಹಲವು ಬಾರಿ ಮನವಿ ಮಾಡಿದ್ದರೂ ಸಹ ಇಲ್ಲಿಯವರೆಗೆ ಕಾರ್ಖಾನೆಯವರಿಂದ ಯಾವುದೆ ಸ್ಪಂದನೆ ಬಂದಿಲ್ಲ. ರೈತರ ಹಿತಕ್ಕಾಗಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಅಥಣಿ ಘಟಕದ ವತಿಯಿಂದ ದಿನಾಂಕ 20 ರಂದು ಕೃಷ್ಣಾ ಸಕ್ಕರೆ ಕಾರ್ಖಾನೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಅವರು ಹೇಳಿದರು.
ಸ್ಥಳೀಯ ಪ್ರವಾಸಿ ಮಂದಿರದಲಿ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡಿ. ನಮ್ಮದೆ ರೈತರ ಕೃಷ್ಣಾ ಸಕ್ಕರೆ ಕಾರ್ಖಾನೆಯವರು ರೈತರು ಪೂರೈಸಿದ ಕಬ್ಬಿಗೆ 2018-19 ನೇ ಸಾಲಿನಲ್ಲಿ 300 ರೂ 2020-21 ನೇ ಸಾಲಿನಲ್ಲಿ 200 ಬಾಕಿ ಹಣ ಇದುವರೆಗೂ ಪಾವತಿಸಿಲ್ಲ ಇದು ರೈತರಿಗೆ ಮಾಡುವ ಅನ್ಯಾಯವಾಗಿದೆ ಎಂದರು. 2021-22 ನೇ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ದರ ನಿಗದಿಪಡಿಸಬೇಕು ಎಂದರು.
ಈ ವೇಳೆ ಪ್ರಕಾಶ ಪೂಜಾರಿ, ರಾವಸಾಬ ಜಗರಾಪ, ಡಿ ಎಮ್ ನಾಯಿಕ, ಗೋಪಾಲ ಮಿಸಳ, ದಶರಥ ನಾಯಿಕ ಸೇರಿದಂತೆ ಇತರರು ಉಪಸ್ಥಿರಿದ್ದರು.