Select Page

ಮಾಲಿಕನ ಹುಡುಕಿಕೊಂಡು 250 ಕಿ.ಮೀ ನಡೆದುಬಂದ ನಾಯಿ ; ಪಂಢರಪುರ ವಿಠ್ಠಲನ ಪವಾಡ ಎಂದ ಭಕ್ತರು

ಮಾಲಿಕನ ಹುಡುಕಿಕೊಂಡು 250 ಕಿ.ಮೀ ನಡೆದುಬಂದ ನಾಯಿ ; ಪಂಢರಪುರ ವಿಠ್ಠಲನ ಪವಾಡ ಎಂದ ಭಕ್ತರು

ನಿಪ್ಪಾಣಿ : ಸಹಾಯ ಪಡೆದ ಮನುಷ್ಯ ಮತ್ತೊಬ್ಬರಿಗೆ ಮೋಸ ಮಾಡಬಹುದು ಆದರೆ ಪ್ರಾಣಿಗಳು ಹಾಗಲ್ಲ.‌ ತುತ್ತು ಅನ್ನ ಹಾಕಿದ ಮಾಲಿಕನ ಋಣ ತೀರಿಸುವವರೆಗೂ ಸಾಯಲ್ಲ. ತನ್ನ ಬದುಕಿಗೆ ಆಸರೆ ಕೊಟ್ಟ ಯಜಮಾನನ ಹಿತ ಕಾಯುವುದೇ ಪ್ರಾಣಿಯ ಮೂಲ ಧ್ಯೇಯವಾಗಿರುತ್ತದೆ.

ಇದೇ ರೀತಿಯಲ್ಲಿ ಪಂಢರಪುರ ವಿಠ್ಠಲ ಹಾಗೂ ರುಕ್ಮಿಣಿ ದರ್ಶನಕ್ಕೆ ಪಾದಯಾತ್ರೆ ಮೂಲಕ ಮನೆ ಮಾಲಿಕನ ಜೊತೆ ತೆರಳಿದ್ದ ಒಂದು ಶ್ವಾನ ನಂತರ ಹಾದಿ ತಪ್ಪಿಸಿಕೊಂಡು ಸುಮಾರು 250 ಕಿ.ಮೀಟರ್ ನಡೆದುಕೊಂಡು ಬಂದು ಮಾಲಿಕನ ಮನೆ ಸೇರುವ ಮೂಲಕ ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿದೆ. ಶ್ವಾನಗಳು ತಾವು ನಂಬಿದ ಯಜಮಾನನಿಗಾಗಿ ಎಷ್ಟು ಹಾತೊರೆಯುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ಇಡೀ ಗ್ರಾಮಸ್ಥರನ್ನು ಅಚ್ಚರಿ ಮೂಡಿಸಿದೆ. ಗ್ರಾಮದ ಕಮಲೇಶ್ ಕುಂಬಾರ್ ಎಂಬುವವರಿಗೆ ಸೇರಿದ ಕಪ್ಪು ಹಾಗೂ ಬಿಳಿಯ ಮಿಶ್ರಿತ ಮಹಾರಾಜ್ ಎಂಬ ಹೆಸರಿನ ನಾಯಿಯೊಂದು ಈಗ ಎಲ್ಲೇಡೆ ಸಾಕಷ್ಟು ಸುದ್ದಿ ಮಾಡುತ್ತಿದೆ. ಅಷ್ಟೇ ಅಲ್ಲಾ ಗ್ರಾಮದಲ್ಲಿ ನಾಯಿಗೆ ಹಾರ ಹಾಕಿ ಮೆರವಣಿಗೆ ಮಾಡಿ ಔತಣಕೂಟವನ್ನು ಏರ್ಪಡಿಸಿದ್ದಾರೆ.

ಜೂನ್ ತಿಂಗಳ ಕೊನೆಯ ವಾರದಲ್ಲಿ, ತನ್ನ ವಾರ್ಷಿಕ ವಾರಿ ಪಾದಯಾತ್ರೆಯ ವೇಳೆ, ಮಹಾರಾಜ್ ತನ್ನ ಯಜಮಾನನೊಂದಿಗೆ ಪಂಡರಪುರಕ್ಕೆ ಹೋದಾಗ, ವೈಥೋಬಾ ದೇವಾಲಯದಲ್ಲಿ ದರ್ಶನ ಮಾಡಿ ವಾಪಸ್ ಬರುವ ವೇಳೆ ನಾಯಿಯು ಕಾಣೆಯಾಯಿತು. ಆದರಿಂದ ಕಮಲೇಶ್ ಕುಂಬಾರ್ ದೇವಸ್ಥಾನದ ಬೀದಿಯಲ್ಲಿ ಹುಡುಕಾಟ ನಡೆಸಿದ್ರು ನಾಯಿ ಕಾಣದ ಹಿನ್ನಲೇ ಸಾಕಷ್ಟು ನಿರಾಶೆಯಿಂದ ಮನೆಗೆ ವಾಪಸ್ ಬರುತ್ತಾನೆ.

ಜುಲೈ 14ರಂದು ಮನೆಗೆ ಮರಳಿದ ಕಮಲೇಶ್ ನಾಯಿಯು ಕಾಣೆಯಾಗಿರುವುದರ ಬಗ್ಗೆ ಬೇಸರವನ್ನು ವ್ಯಕ್ತಪಡಿಸುತ್ತಾನೆ. ಆದರೆ ಕೆಲವು ದಿನಗಳ ನಂತರ ಕಾಣೆಯಾಗಿದ್ದ ನಾಯಿ ಮನೆಯ ಮುಂದೆ ಬಂದು ಕೂಗಾಡಿದ್ದಾಗ ಕುಟುಂಬಸ್ಥರು

ನೋಡಿದ ವೇಳೆ ತಮ್ಮನಾಯಿ ಮಹಾರಾಜ್ ಬಾಲವನ್ನು ಅಲುಗಾಡಿಸುತ್ತಾ ಕಾಣಿಸಿದೆ. ಇದರಿಂದ ಸಂತೋಷಗೊಂಡ ಮಾಲೀಕ ಹಾಗೂ ಗ್ರಾಮದ ಜನರು ಮಹಾರಾಜ್‌ನ ತಿರುಗಿಬರುವಿಕೆಯ ಹಿನ್ನಲೆ ಔತಣಕೂಟ ಏರ್ಪಡಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.

ಇನ್ನೂ 250 ಕಿಲೋ ಮೀಟರ್ ನಿಂದ ದಾರಿ ಹುಡುಕಿಕೊಂಡು ಬಂದ ನಾಯಿಯ ಸಾಹಸಕ್ಕೆ ಮಾಲೀಕ ಕಮಲೇಶ್ ಇದು ಪಾಂಡುರಂಗನ ದಯೆ ಎಂದು ಸಾಕಷ್ಟು ಸಂಸತವನ್ನು ವ್ಯಕ್ತಪಡಿಸಿದ್ದಾನೆ. ಇನ್ನೂ ಕಮಲೇಶ್ ಪ್ರತಿವರ್ಷವು ಪಾಂಡುರಂಗನ ದರ್ಶನವನ್ನು ಪಡೆಯುವುದಾಗಿ ತಿಳಿಸಿದ್ದಾನೆ.

Advertisement

Leave a reply

Your email address will not be published. Required fields are marked *

error: Content is protected !!