
ಬಿಜೆಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಬೆಳಗಾವಿ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಅವಿನಾಶ್ ರಾಜೀನಾಮೆ

ಬೆಳಗಾವಿ : ಮಂಗಳೂರಿನ ಸುಳ್ಯ ಮೂಲದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟರ್ ಹತ್ಯೆಯನ್ನು ಖಂಡಿಸಿ ಅನೇಕ ಬಿಜೆಪಿ ಯುವಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತಿದ್ದು ಸಧ್ಯ ಬೆಳಗಾವಿಯಲ್ಲಿ ಮುಂದುವರಿದಿದೆ.

ಮೂಡಲಗಿ ತಾಲೂಕಿನ ಅರಭಾವಿ ಮತಕ್ಷೇತ್ರದ ಬಿಜೆಪಿ ಸಾಮಾಜಿಕ ಜಾಲತಾಣದ ಸದಸ್ಯ ಸ್ಥಾನಕ್ಕೆ ಅವಿನಾಶ್ ಹಿರೇಮಠ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಈ ಕುರಿತಂತೆ ಸರಕಾರ ಪ್ರತೀ ಬಾರಿ ಹಿಂದೂ ಕಾರ್ಯಕರ್ತರ ಕೊಲೆಯಾದಾಗಲೂ ಕೂಡ ಕಠಿಣ ಕ್ರಮ ಜುಗಿಸಿದ್ದೀನಿ ಎಂದು ಹೇಳುತ್ತ ಬಂದಿದ್ದಾರೆ. ಈ ಹೇಳಿಕೆ ಕೇವಲ ಭರವಸೆಯಾಗಿ ಉಳಿದಿರುವ ಕಾರಣ ಅರಭಾವಿ ಮಂಡಲ ಸಾಮಾಜಿಕ ಜಾಲತಾಣದ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ. ತಮ್ಮ ರಾಜಿನಾಮೆ ಪತ್ರವನ್ನು ಬಿಜೆಪಿ ಅರಭಾವಿ ಮಂಡಲಾಧ್ಯಕ್ಷರಾದ ಮಹಾದೇವ ಅಕ್ಕಿ ರವರಿಗೆ ತಮ್ಮ ರಾಜಿನಾಮೆಯನ್ನು ನೀಡಿದ್ದಾರೆ.

ಬಿಜೆಪಿ ಯುವ ಮೋರ್ಚಾ ಸದಸ್ಯರ ಮೇಲೆ ಹೆಚ್ಚಿದ ಒತ್ತಡ : ಯುವ ಬಿಜೆಪಿ ಮುಖಂಡನ ಹತ್ಯೆ ಖಂಡಿಸಿ ಬಿಜೆಪಿ ಸದಸ್ಯರ ರಾಜೀನಾಮೆ ಪ್ರಹಸನ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಬಿಜೆಪಿ ನಾಯಕರ ಮೇಲೆ ರಾಜೀನಾಮೆ ನೀಡುವಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರಿಂದ ಅನೇಕ ನಾಯಕರಿಗೆ ಇರುಸು ಮುರುಸು ಉಂಟಾಗಿದೆ. ಅಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ವ್ಯಕ್ತವಾಗುತ್ತಿವೆ.
ಶಿವು ಉಪ್ಪಾರ ಹತ್ಯೆಯ ನ್ಯಾಯಕ್ಕಾಗಿ ಆಗ್ರಹ : ಒಂದು ಕಡೆ ಬಿಜೆಪಿ ಯುವ ಮುಖಂಡ ಪ್ರವೀಣ ಹತ್ಯೆಗೆ ವಿರೋಧ ವ್ಯಜ್ತವಾಗುತ್ತಿದ್ದರೆ ಮತ್ತೊಂದು ಕಡೆ ಭಜರಂಗದಳ ಕಾರ್ಯಕರ್ತ ಹಾಗೂ ಗೋ ರಕ್ಷಕ ಶಿವು ಉಪ್ಪಾರ ಕೋಲೆ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂಬ ಆಗ್ರಹ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ಗೋಕಾಕ್ ಮೂಲದ ಯುವಕ ಶಿವು ಉಪ್ಪಾರ್ ಕೊಲೆ ಮಾಡಿದವರ ವಿರುದ್ಧ ರಾಜ್ಯ ಬಿಜೆಪಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಆಗ್ರಹ ಎಲ್ಲೆಡೆ ಕೇಳಿಬರುತ್ತಿದೆ.
ಗೋ ಸಂರಕ್ಷಣೆ ಮಾಡುತ್ತಿದ್ದ ಹಿಂದೂಪರ ಹೋರಾಟಗಾರ ಶಿವು ಉಪ್ಪಾರ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದನ್ನು ಖಂಡಿಸಿ ರಾಜ್ಯಾದ್ಯಂತ ಉಗ್ರ ಹೋರಾಟಗಳು ನಡೆದಿದ್ದವು. ಈ ಕುರಿತು ಬಿಜೆಪಿ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಈವರೆಗೂ ಮೃತ ಯುವಕನಿಗೆ ನ್ಯಾಯ ಸಿಗಲಿಲ್ಲ ಎಂಬ ಭಾವನೆ ಮನೆಮಾಡಿದೆ.