ಕುಡಚಿ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ : ಮಹೇಂದ್ರ Vs ರಾಜೀವ
ಕುಡಚಿ : ಬಿಜೆಪಿ ಶಾಸಕ ಪಿ. ರಾಜೀವ್ ವಿರುದ್ಧ ಕಾಂಗ್ರೆಸ್ ಅಳೆದು ತೂಗಿ ಪ್ರಭಲ ಅಭ್ಯರ್ಥಿ ಕಣಕ್ಕೆ ಇಳಿಸಿದ್ದು, ಮಹೇಂದ್ರ ತಮ್ಮಣ್ಣವರ ಅವರಿಗೆ ಟಿಕೆಟ್ ಕೊಟ್ಟಿದ್ದು ಕುಡಚಿ ಅಖಾಡ ರಂಗೇರುವಂತೆ ಮಾಡಿದೆ.
ಈ ಹಿಂದೆ ನಿರಂತರವಾಗಿ ಕಾಂಗ್ರೆಸ್ ನಿಂದ ಗೆದ್ದಿದ್ದ ಶಾಮ್ ಘಾಟಗೆ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕ ಶಾಮ್ ಘಾಟಗೆ ಮಗ ಅಮೀತ್ ಘಾಟಗೆ ಕೂಡಾ ಪಿ. ರಾಜೀವ್ ವಿರುದ್ಧ ಹೀನಾಯ ಸೋಲು ಖಂಡಿದ್ದರು.
ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಕಾರ್ಯಕ್ರಮ ನಡೆಸಿದ್ದ ಮಹೇಂದ್ರ ತಮ್ಮಣ್ಣವರ. ಜನರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಜೊತೆಗೆ ಕ್ಷೇತ್ರದಲ್ಲಿ ಬಿಜೆಪಿ ವಿರೋಧಿ ಅಲೆ ಹೆಚ್ಚಾದ ಹಿನ್ನಲೆಯಲ್ಲಿ ಈ ಬಾರಿ ಕಾಂಗ್ರೆಸ್ ಕ್ಷೇತ್ರ ವಶಕ್ಕೆ ತಂತ್ರ ಹೆಣೆದಿರುವುದು ವಿಶೇಷ.