Select Page

Advertisement

ಬೆಳಗಾವಿ ಚನ್ನಮ್ಮ ವೃತ್ತದ ಬಳಿ ಅಪಘಾತ : ಬೈಕ್ ಸವಾರನಿಗೆ ಗಂಭೀರ ಗಾಯ

ಬೆಳಗಾವಿ ಚನ್ನಮ್ಮ ವೃತ್ತದ ಬಳಿ ಅಪಘಾತ : ಬೈಕ್ ಸವಾರನಿಗೆ ಗಂಭೀರ ಗಾಯ

ಬೆಳಗಾವಿ : ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಬೈಕ್ ಸವಾರನೊಬ್ಬ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ನಗರದ ಚನ್ನಮ್ಮ ವೃತ್ತದ  ಡಿಸಿ ಕಾಂಪೌಂಡ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು ಚಲಿಸುತ್ತಿದ್ದ ಕಾರಿನ ಹಿಂಬದಿ ಬೈಕ್ ಸವಾರ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಬದಿ ಗ್ಲಾಸ್ ಸಂಪೂರ್ಣ ಒಡೆದು ಹೊಗಿದೆ. ಇನ್ನೂ ಬೈಕ್ ನ ಮುಂಬದಿ ಸಂಪೂರ್ಣ ಜಖಂ ಆಗಿದ್ದು ಗಾಯಾಳುವಿನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *