Select Page

Advertisement

ಕೇದಾರನಾಥ ಸನ್ನಿಧಾನದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಕೇದಾರನಾಥ ಸನ್ನಿಧಾನದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಐತಿಹಾಸಿಕ ಕ್ಷೇತ್ರವಾದ ಉತ್ತರಾಖಂಡ ರಾಜ್ಯದ ಶ್ರೀ ಕೇದಾರನಾಥ ಸನ್ನಿಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ. ಈ ಕುರಿತು ಹಲವು ಪೋಟೋಗಳನ್ನೂ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.‌

ಈ ಕುರಿತು ಬರೆದುಕೊಂಡಿರುವ ಇವರು. ಕೈಲಾಸ ಪರ್ವತದ ನಂತರ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯದ ಶ್ರೀ ಕೇದಾರನಾಥ್ ಸ್ವಾಮಿಯ ದರ್ಶನ, ಆಶೀರ್ವಾದ ಪಡೆದು, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ. ನೈಸರ್ಗಿಕವಾಗಿಯೇ ಅಲೌಕಿಕ ದೃಶ್ಯಗಳಿಂದ ಕೂಡಿರುವ ಈ ದೇವಾಲಯ ಪವಾಡಗಳು ಹಾಗೂ ಅನೇಕ ಪೌರಾಣಿಕ ಕಥೆಗಳನ್ನು ಒಳಗೊಂಡಿರುವುದು ವಿಶೇಷ. || ಹರ ಹರ ಮಹಾದೇವ ||

Advertisement

Leave a reply

Your email address will not be published. Required fields are marked *