Select Page

Advertisement

ಸೇನಾ ಹೆಲಿಕಾಪ್ಟರ್ ದುರಂತ : 27 ವರ್ಷದ ಯುವ ಸೈನಿಕ ಸಾವು

ಸೇನಾ ಹೆಲಿಕಾಪ್ಟರ್ ದುರಂತ : 27 ವರ್ಷದ ಯುವ ಸೈನಿಕ ಸಾವು

ಬೆಂಗಳೂರು : ಬುಧವಾರ ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹದಿಮೂರು ಜನ ಮೃತಪಟ್ಟಿದ್ದು, ಇದರಲ್ಲಿ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಆಗಿದ್ದ ಆಂದ್ರಪ್ರದೇಶದ
ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ (27) ಮೃತಪಟ್ಟಿದ್ದಾರೆ‌.

2012 ರಲ್ಲಿ ಲ್ಯಾನ್ಸ್​ ನಾಯ್ಕ್​ ಸಾಯಿ ತೇಜ್​ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್ ಗೆ ಸೇರಿದ್ದರು. ಸೈನ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದ ಈ ಯುವ ಸೈನಿಕ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಸೇರಿಕೊಂಡಿದ್ದರು. ಸಾಯಿ ತೇಜ್ ಅವರ ಸಹೋದರ ಕೂಡಾ ಭಾರತೀಯ ಸೇನೆಯಲ್ಲಿದ್ದು ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. (L/NK B sai Teja)

ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಅವರಿಗೆ ಪತ್ನಿ ಸೇರಿದಂತ ಮೂರು ವರ್ಷದ ಗಂಡು ಮಗು ಹಾಗೂ ಎರಡು ವರ್ಷದ ಮುದ್ದಾದ ಹೆಣ್ಣು ಮಗು ಇದೆ. ಕಳೆದ ತಿಂಗಳಷ್ಟೇ ಮನೆಗೆ ಬಂದಿದ್ದ ಇವರು ಮಕ್ಕಳ ಮುಖವನ್ನು ಕೊನೆಯದಾಗಿ ಕಣ್ತುಂಬಿಕೊಂಡು‌ ಹೋಗಿದ್ದರು. ಆದರೆ ಇಂದು ನಡೆದ ಹೆಲಿಕಾಪ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ್ದು ಇಡೀ ದೇಶವೇ ಮರುಗುತ್ತಿದೆ.

(An IAF Mi-17V5 helicopter, with CDS Gen Bipin Rawat on board, met with an accident today near Coonoor, Tamil Nadu.
An Inquiry has been ordered to ascertain the cause of the accident)

TamilNadu_Chopper_Crash_Bipin_Rawat

Advertisement

Leave a reply

Your email address will not be published. Required fields are marked *