
ಹುಚ್ಚ ರಾಹುಲ್ ಗಾಂಧಿ ಯಾಕೆ ಮಾತನಾಡುವುದಿಲ್ಲ : ಯತ್ನಾಳ್

ವಿಜಯಪುರ : ಭಾರತದಲ್ಲಿದ್ದುಕೊಂಡು ಕೆಲವರು ತಾಲಿಬಾನಿಗಳಿಗೆ ಬೆಂಬಲ ನೀಡುತ್ತಿರುವುದನ್ನು ಕೆಲವರು ಖಂಡಿಸುತ್ತಿಲ್ಲ. ಎಲ್ಲದಕ್ಕೂ ಹೇಳಿಕೆ ನೀಡುವ ಹುಚ್ಚ ರಾಹುಲ್ ಗಾಂಧಿ ಈ ವಿಷಯಕ್ಕೆ ಯಾಕೆ ಮಾತನಾಡುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಹಿಂಸಾಚಾರವನ್ನು ಭಾರತದಲ್ಲಿರುವ ಕೆಲವರು ಬೆಂಬಲಿಸಿತ್ತಿದ್ದಾರೆ. ನಮ್ಮ ಭಾರತದಲ್ಲಿರುವ ಬುದ್ದಿಜೀವಿಗಳು ತಾಲಿಬಾನಿಗಳಿಗೆ ಹುಟ್ಟಿದವರಂತೆ ಆಡುತ್ತಾರೆ. ಹುಚ್ಚ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ ಅವರ ವಿರುದ್ಧ ಮಾತನಾಡುವುದಿಲ್ಲ. ಇವರೆಲ್ಲರೂ ಜಾತ್ಯಾತೀತರ ಸೋಗಿನಲ್ಲಿರುವ ದೇಶದ್ರೋಹಿಗಳು ಎಂದು ಆರೋಪಿಸಿದರು.
ನಮ್ಮ ದೇಶ ಹಾಗೂ ಧರ್ಮ ಉಳಿಯಬೇಕಾದರೆ ಭಾರತದಲ್ಲಿರುವ ತಾಲಿಬಾನ್ ಮನಸ್ಥಿತಿಯ ಜನರನ್ನು ಗುಂಡಿಕ್ಕಿ ಕೊಲ್ಲಬೇಕು. ಯಾವುದೇ ಕಾರಣಕ್ಕೂ ಅಫ್ಘಾನಿಸ್ತಾನದ ಮುಸ್ಲಿಂಮರನ್ನು ಭಾರತದೊಳಗೆ ಬಿಟ್ಟುಕೊಳ್ಳಬಾರದು. ಅವರೇನಾದರು ನಮ್ಮ ಧರ್ಮಕ್ಕೆ ಮತಾಂತರವಾಗುವುದಾದರೆ ಬರಲಿ ಎಂದರು.