SUV ಕಾರುಗಳಿಗೆ ಹೊಸ ಲೋಗೋ ಪರಿಚಯಿಸಿದ ಮಹೀಂದ್ರಾ
ಮುಂಬೈ : 1945 ರಿಂದ ಪ್ರಾರಂಭವಾದ ಮಹೀಂದ್ರಾ & ಮಹೀಂದ್ರಾ ಕಂಪನಿ ಸಧ್ಯ ಭಾರತದಲ್ಲಿ ಅತಿ ಹೆಚ್ಚು ಕಾರು ತಯಾರಿಸುತ್ತಿದ್ದು 2002 ರಲ್ಲಿ ಎಸ್ ಯು ವ್ಹಿ ವಾಹನಗಳಿಗೆ ಪರಿಚಯಿಸಿದ ಲೋಗೋ ಬದಲಾವಣೆಯಾಗಿದ್ದು ಈಗ ಹೊಸ ಲೋಗೋ ಪರಿಚಯಿಸಿದೆ.
ಹೊಸದಾಯಿ ಪರಿಚಯಿಸುತ್ತಿರುವ ಮಹೀಂದ್ರಾ -XUV700 ಕಾರಿನ ಜೊತೆಗೆ ಮಹೀಂದ್ರಾ & ಮಹೀಂದ್ರಾ ಕಂಪನಿ ತನ್ನ ಹೊಸ ಲೋಗೋ ಬಿಡುಗಡೆ ಮಾಡಿದೆ. ಕಳೆದ 21 – ವರ್ಷಗಳ ನಂತರ ತನ್ನ ಹೊಸ ಲೋಗೊವನ್ನು ಪರಿಚಯಿಸಿದಂತಾಗಿದೆ.
ಹೊಸ ಆವೃತ್ತಿಯ XUV700 ವರ್ಷಾಂತ್ಯದಲ್ಲಿ ಪಾದಾರ್ಪಣೆ ಮಾಡಲಿದ್ದು W601 ಅವತರಣಿಕೆ ಹೊಂದಿದೆ. ಎಲ್ಲಾ ಹೊಸದಾಗ SUV ಗೆ ಡೀಸೆಲ್ ಹಾಗೂ ಪೆಟ್ರೋಲ್ ಯುನಿಟ್ ಗಳ ಮಾದರಿಗಳನ್ನು ನೀಡಿದೆ.