ಪರಿಷತ್ ಚುನಾವಣೆ ಹೊತ್ತಲ್ಲೇ ವೈರಲ್ ಆಯ್ತು ಅಭ್ಯರ್ಥಿಯ ಅಶ್ಲೀಲ ವೀಡಿಯೋ
ವಿಜಯಪುರ : ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆ ಕೊನೆಯ ಹಂತ ತಲುಪಿದ್ದು ಡಿ. 10 ರಂದು ಮತದಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜಕೀಯ ನಸಯಕರ ಒಂದೊಂದು ಕರಾಳ ಮುಖಗಳು ಹೊರಬರುತ್ತಿದ್ದು ಇತ್ತ ವಿಜಯಪುರ ಪಕ್ಷೇತರ ಅಭ್ಯರ್ಥಿ ಎನ್ನಲಾದ ಅಶ್ಲೀಲ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
ವಿಜಯಪುರ – ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಲೋಣಿ ಎಂಬುವವರದು ಎನ್ನಲಾದ ಅಶ್ಲೀಲ ವೀಡಿಯೋ ಬಾರಿ ವೈರಲ್ ಆಗಿದೆ. ಮತದಾನ ಕೇವಲ ಒಂದು ದಿನ ಬಾಕಿ ಇರುವಾಗಲೇ ಈ ರೀತಿಯ ವೀಡಿಯೋ ವೈರಲ್ ಆಗಿದ್ದು ಬಾರಿ ಚರ್ಚೆಗೆ ಗ್ರಾಮವಾಗಿದೆ.
ಮಂಗಳವಾರ ನಡೆದ ಸುದ್ದಿಘೋಷ್ಠಿಯಲ್ಲಿ ಮಲ್ಲಿಕಾರ್ಜುನ ಲೋಣಿ ಮಾತನಾಡಿ. ನನ್ನ ಚಾರಿತ್ರ್ಯ ವಧೆ ಮಾಡಲು ಅಶ್ಲೀಲ ವೀಡಿಯೋ ಬಿಡುಗಡೆ ಮಾಡಬಹುದು ಎಂಬ ಅನುಮಾನವನ್ನು ಅವರು ಹೊರ ಹಾಕಿದ್ದರು. ಈ ನಂತರ ಸಾಮಾಜಿಕ ಜಾಲತಾಣದಲ್ಲಿ ಯುವತಿ ಜೊತೆ ಕಾಮದಾಟ ನಡೆಸಿರುವ ಕೆಲವು ವೀಡಿಯೋ ತುಣುಕುಗಳು ಎಲ್ಲೆಡೆ ಹರಿದಾಡುತ್ತಿವೆ.