
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಬೆಳಗಾವಿ ನಂಟು

ಬೆಳಗಾವಿ : ಭಾರತ ದೇಶದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಗೂ ಬೆಳಗಾವಿಗೂ ಅವಿನಾಭಾವ ನಂಟು ಇತ್ತು. ನಾಲ್ಕು ಬಾರಿ ಬೆಳಗಾವಿಗೆ ಆಗಮಿಸಿದ್ದ ರಾವತ್ ಬೆಳಗಾವಿಯ ಮರಾಠಾ ಲಘು ಪದಾತಿದಳದ ಬಗ್ಗೆ ಹೆಚ್ಚಿನ ಅಭಿಮಾನ ಹೊಂದಿದ್ದರು.
2017ರ ನವಂಬರ್ 3ರಂದು ಎಂಎಲ್‌ಆಯ್‌ಆರ್‌ಸಿ ಪಾಸಿಂಗ್ ಔಟ್ ಪರೇಡ್ ನಲ್ಲಿ ಭಾಗಿಯಾಗಿದ್ದರು. ಆಗ ಅವರು, ಕಾಶ್ಮೀರದಲ್ಲಿ ಉಗ್ರವಾದಿಗಳನ್ನ ಮಟ್ಟಹಾಕಲು ಸೇನೆ ತೆಗೆದುಕೊಂಡು ನಿರ್ಧಾರ ಹಾಗೂ ದೇಶದ ಹೊರಗಿನ ಉಗ್ರರನ್ನ ಹೊಡೆದುರುಳಿಸುವ ಶಕ್ತಿ ಸೇನೆಗಿದೆ ಎಂದು ಹೆಮ್ಮೆಯಿಂದ ಹೇಳಿದ್ದರು.
ದೇಶದ ಒಳಗಿರುವ ರಾಷ್ಟ್ರ ವಿರೋಧಿ ಶಕ್ತಿಗಳನ್ನ ಮಟ್ಟಹಾಕಲು ಸಂಕಲ್ಪ ಮಾಡಿದ್ದೇವೆ ಅಂತಾ ಭಾಷಣ ಮಾಡಿ ಎಲ್ಲರಲ್ಲಿ ದೇಶ ಪ್ರೇಮ ಹೆಚ್ಚಿಸಿದ್ದರು.
ಹೊಸದಾಗಿ ಆಯ್ಕೆಯಾದ ಸೈನಿಕರನ್ನುದ್ದೇಶಿಸಿ ಮಾತನಾಡಿದ್ದ ಬಿಪಿನ್ ರಾವತ್. 2018ರಲ್ಲಿ ಅಕ್ಟೋಬರ್ 30ರಂದು ಶರ್ಕತ್ ಕದನದ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆಗ ಅವರು ಭಾರತೀಯ ಭೂಸೇನೆ ಮುಖ್ಯಸ್ಥರಾಗಿದ್ದರು.
1918ರಲ್ಲಿ ಅಕ್ಟೋಬರ್ 23ರಿಂದ 30ರ ವರೆಗೆ ಮಿಸಿಪಿಟೋನಿ ದೇಶದ ಶರ್ಕತ್ ಪ್ರದೇಶದಲ್ಲಿ ಒಟ್ಟೊಮನ್ ಸೈನಿಕರ ವಿರುದ್ಧ ಹೋರಾಡಿ ಜಯಗಳಿಸಿದ್ದ ಮರಾಠಾ ರೆಜಿಮೆಂಟ್ ಸೈನಿಕರು.
ದೇಶದ ಹೆಮ್ಮೆಯ ಸೇನೆಗಳ ಪಡೆಯ ಮುಖ್ಯಸ್ಥ ಘನಘೋರ ಅಪಘಾತದಲ್ಲಿ ನಿಧನರಾಗಿದ್ದಕ್ಕೆ ಬೆಳಗಾವಿ ಜಿಲ್ಲೆಯ ಜನರು ಶೋಕ ವ್ಯಕ್ತಪಡಿಸಿದ್ದಾರೆ.