ಗೋಕಾಕ್ : ಶ್ರೀರಾಮಸೇನೆ ಕಾರ್ಯಕರ್ತರಿಂದ ಉಳಿಯಿತು ಗೋವಿನ ಜೀವ
ಬೆಳಗಾವಿ ( ಗೋಕಾಕ್ ) : ಅಕ್ರಮ ಗೋ ಸಾಗಾಟಕ್ಕೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಸದ್ಯ ಎಲ್ಲರಲ್ಲೂ ಮೂಡಿದೆ. ಇಂದು ಗೋಕಾಕ್ ನಗರದ ಶ್ರೀರಾಮಸೇನೆ ಕಾರ್ಯಕರ್ತರ ತಂಡ ಅಕ್ರಮ ಗೋ ಸಾಗಣೆ ಮಾಡುವುದನ್ನು ತಡೆದಿದ್ದು ಕ್ರೂರವಾಗಿ ಕೊಂದ ಒಂದು ಗೋ ಹಾಗೂ ಜೀವಂತ ಆಕಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಗೋ ಸಾಗಣೆ ಎಗ್ಗಿಲ್ಲದೆ ಸಾಗುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ. ಹಲಾಲ್ ಕಟ್ ಮಾಡಿದ್ದ ಒಂದು ಆಕಳು ಹಾಗೂ ಜೀವಂತ ಗೋವನ್ನು ಸಾಗಿಸುತ್ತಿದ್ದ ವಾಹನಕ್ಕೆ ಗೋಕಾಕ್ ನಗರದ ಶ್ರೀರಾಮಸೇನೆ ಕಾರ್ಯಕರ್ತರು ತಡೆ ಹಿಡಿದ್ದು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Video- https://www.facebook.com/108396434841799/posts/183711077310334/
ಅಕ್ರಮವಾಗಿ ಸಾಗಿಸುತ್ತಿದ್ದ ಗೋವನ್ನು ರಕ್ಷಿಸಿ ನಗರದ ಗೋವರ್ಧನ ಗೋ ಶಾಲೆಗೆ ಬಿಡುವಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಯಶಸ್ವಿಯಾಗಿದ್ದು, ಕತ್ತು ಸೀಳಿ ಕೊಂದ ಗೋವಿನ ಅಂತ್ಯಸಂಸ್ಕಾರ ಮಾಡಿದ್ದಾರೆ.
ಅಕ್ರಮ ಗೋ ಸಾಗಾಣಿಕೆ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಬರವಸೆ ನೀಡಿದ್ದರು ಈ ರೀತಿ ಪ್ರಕರಣಗಳು ಗೋ ಪ್ರೀಯರಿಗೆ ನೋವು ತರಿಸಿದೆ.