
ಹೃದಯಾಘಾತದಿಂದ ಯುವತಿ ಸಾವು

ಮಡಿಕೇರಿ: 24ರ ಯುವತಿಯೊಬ್ಬಳು ಕೆಲಸಕ್ಕೆ ಹೊರಟಿದ್ದ ವೇಳೆ ಏಕಾಏಕಿ ಕುಸಿದು ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೊಡಗು ಜಿಲ್ಲೆಯ ನೆಲಜಿ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದ ಮಣವಟ್ಟಿರ ಪೊನ್ನಪ್ಪ ಅವರ ಪುತ್ರಿ ನಿಲಿಕಾ ಪೊನ್ನಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ ಯುವತಿ. ನಿಲಿಕಾ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೊರಡುತ್ತಿದ್ದ ವೇಳೆ ನಿಲಿಕಾ ಏಕಾಏಕಿ ಕುಸಿದು ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.