
ಕೃಷ್ಣಾ ನದಿಯಲ್ಲಿ ತೇಲಿ ಬಂತು ಮಹಿಳೆಯ ಶವ

ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಮುಂದುವರಿದಿದ್ದು ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇನ್ನೂ ನದಿ ನೀರಿನಲ್ಲಿ ಮಹಿಳೆ ಶವ ತೇಲಿ ಬಂದ ಘಟನೆ ನಡೆದಿದೆ.
ಚಿಕ್ಕೋಡಿ ತಾಲೂಕಿನ ಯಡೂರಿನ ಕೃಷ್ಣಾ ನದಿತೀರದಲ್ಲಿ, ಮಂಗಳವಾರ ಮಧ್ಯಾಹ್ನ ಸುಶೀಲಾ ತಾತೋಬಾ ಅನೂಜೆ (68) ಮೃತ ಮಹಿಳೆ ಶವ ತೇಲಿ ಬಂದಿದ್ದು ನದಿ ದಂಡೆಯ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಮೃತರ ಸಂಬಂದಿಕರು ಮಾಹಿತಿ ನೀಡಿದ್ದು ಅನಾರೋಗ್ಯದಿಂದ ನರಸಿಂಹವಾಡಿ ಗ್ರಾಮದ ಕೃಷ್ಣಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದಾಳೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಂಕಲಿ ಪೊಲೀಸ್ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಘಟನೆಯ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.