VIDEO : ನನ್ನ ಸಹೋದರನಿಂದ ಈ ಶೂಟೌಟ್ ನಡೆದಿದೆ : ಚಿತ್ರನಟ ಶಿವರಂಜನ್ ಸ್ಪಷ್ಟನೆ
ಬೈಲಹೊಂಗಲ : ಮಂಗಳವಾರ ತಡರಾತ್ರಿ ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿನಡೆದಿದ್ದು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಘಟನೆ ಕುರಿತಾಗಿ ಇಂದು ಬೆಳಿಗ್ಗೆ ಮಾತನಾಡಿದ ಇವರು. ನನ್ನ ಸಹೋದರ ಮಾಡಿದ ಕೃತ್ಯ ಇದಾಗಿದ್ದು. ಅವರಿಗೆ ನನ್ನ ಮೇಲೆ ಯಾಕಿಷ್ಟು ದ್ವೇಷ ಗೊತ್ತಿಲ್ಲ. ಘಟನೆಗೆ ಸ್ಪಂದಿಸಿದ ಪೊಲೀಸರಿಗೂ ಧನ್ಯವಾದ ತಿಳಿಸಿದ್ದಾರೆ.
ಘಟನೆ ವಿವರ : ಪಟ್ಟಣದ ಗಣ್ಯರು, ಹಿರಿಯ ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ವ್ಯಕ್ತಿಯೊಬ್ಬರು ಗುಂಡಿನ ದಾಳಿ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಹಳೆಯ ಹಣುಮಂತ ದೇವರ ದೇವಸ್ಥಾನ ಹತ್ತಿರದ ಅವರ ಮನೆ ಎದುರು ಗುಂಡಿನ ದಾಳಿ ನಡೆದಿದೆ. ಅದೃಷ್ಠವಷಾತ ಮಿಸ್ ಪೈರಿಂಗ್ ಆಗಿ ಯಾವುದೇ ಹಾನಿಯಾಗಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಹೆಚ್ಚುವರಿ ಎಸ್ಪಿ ನಂದಗಾಂವ, ಡಿಎಸ್ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್. ಸಾತೇನಹಳ್ಳಿ ಭೇಟಿ ನೀಡಿ ತನಿಖೆ ನಡೆಸಿದರು. ಆರೋಫಿ ಮಹೇಶ ಎಂದು ಗೊತ್ತಾಗಿದ್ದು , ಆತನ ಬಂಧನಕ್ಕೆ ಪೊಲೀಸರು ಶೋದ ನಡೆಸಿದ್ದಾರೆ.
ಶಿವರಂಜನ್ ಬೋಳಣ್ಣವರ್ ಕನ್ನಡದ ಅಮೃತ ಸಿಂದು, ವಿರಭದ್ರ ಸೇರಿದಂತೆ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ.