ಬೈಲಹೊಂಗಲ : ಚಲನಚಿತ್ರ ನಟನ ಮೇಲೆ ಗುಂಡಿನ ದಾಳಿ
ಬೈಲಹೊಂಗಲ : ಪಟ್ಟಣದಲ್ಲಿ ಇಂದು ರಾತ್ರಿ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆದಿದೆ.
ಚಲನಚಿತ್ರ ನಟ ಶಿವರಂಜನ್ ಬೋಳಣ್ಣವರ್ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಗಳು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಇದಲ್ಲಿ ಯಾರಿಗೂ ಗಾಯವಾಗಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿಗಳ ಪೈಕಿ ಓರ್ವ ಶಿವರಂಜನ್ ಬೋಳಣ್ಣವರ ಅವರ ಸಹೋದರ ಸಂಬಂಧಿ ಕೂಡಾ ಇದ್ದನು ಎಂದು ಹೇಳಲಾಗುತ್ತಿದೆ.
ಹಣಮಂತ ದೇವರ ದೇವಸ್ಥಾನದ ಬಳಿ ಇರುವ ಅವರ ಹಳೆಯ ಮನೆಗೆ ಭೇಟಿ ನೀಡಿ ವಾಪಸ ಆಗುವ ಸಂದರ್ಭದಲ್ಲಿ 3-4 ಸುತ್ತು ಫೈರಿಂಗ್ ನಡೆದಿದ್ದು ಯಾವುದೆ ಪ್ರಾಣಾಪಾಯವಾಗಿಲ್ಲವೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವರಂಜನ್ ಬೋಳಣ್ಣವರ್ ಅವರು ಕನ್ನಡದ ಅಮೃತ ಸಿಂದು, ವಿರಭದ್ರ ಸೇರಿದಂತೆ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ.