
ರಾಯಬಾಗ : ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ; ಆರೋಪಿಗಳ ಬಂಧನ

ಬೆಳಗಾವಿ : ರಾಯಬಾಗ ತಾಲೂಕಿನಲ್ಲಿ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಹಾರೂಗೇರಿ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಹೋಗಿ ಬರುವುದಾಗಿ ಹೇಳಿ ಇಬ್ಬರು ಅಪ್ರಾಪ್ತ ಯುವತಿಯರನ್ನು ಕರೆದೊಯ್ದ ಮೂವರು ಸವಸುದ್ದಿ ಗುಡ್ಡಗಾಡು ಪ್ರದೇಶದಲ್ಲಿ ಓರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇನ್ನೋರ್ವಳ ಮೇಲೆ ಮತ್ತೊಬ್ಬ ಆರೋಪಿ ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾನೆ.
ಬಂಧಿತರು ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ಅಭಿಷೇಕ ದೇವನೂರು ಹಾಗೂ ಹಾರೂಗೇರಿ ಮೂಲದ ಆದಿಲ್ ಶಾ ಜಮಾದಾರ್ ಎಂಬಾತ ಇಬ್ಬರನ್ನು ಪೊಲೀಸರರು ಬಂಧಿಸಿದ್ದು ಒನ್ನೋರ್ವ ಆರೋಪಿ ಅಲಕನೂರು ಗ್ರಾಮದ ಕೌತುಕ್ ಬಾಬಾಸಾಹೇಬ್ ಬಡಿಗೇರ ತಲೆಮರೆಸಿಕೊಂಡಿದ್ದು ಪೊಲೀಸರು ಬಲೆ ಬೀಸಿದ್ದಾರೆ.
ಕಳೆದ ಜ. 1 ರಂದು ಅಪ್ರಾಪ್ತೆ ಕೊಕಟನೂರು ಯಲ್ಲಮ್ಮ ದೇವಿಗೆ ಹೋದ ಸಂದರ್ಭದಲ್ಲಿ ಅಭಿಷೇಕನ ಪರಿಚಯ ಆಗುತ್ತದೆ. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಮೆಸೆಜ್ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಸವದತ್ತಿಗೆ ಹೋಗಿ ಬರೋಣ ಎಂದು ಒಪ್ಪಿಸಿ ನಂತರ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ.