ಮೇಡಂ ರಾಜಾಹುಲಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನಿಸಿದ್ರಾ….?
ಬೆಂಗಳೂರು : ಯಡಿಯೂರಪ್ಪ ಅವರ ಭೇಟಿ ಕೇವಲ ಸೌಹಾರ್ದಯುತವಾದ ಭೇಟಿ. ಇದಕ್ಕೆ ರಾಜಕೀಯ ಲೇಪನ ಭೇಡ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಯಡಿಯೂರಪ್ಪ ಮನೆಗೆ ಭೇಟಿ ನಂತರ. ಮೇಡಂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ಹೇಳಲಾಗ್ತಿದೆ ಅವರನ್ನು ಕಾಂಗ್ರೆಸ್ ಪಕ್ಕಕ್ಕೆ ಆಹ್ವಾನಿಸಲು ಭೇಟಿ ನೀಡಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕಿ ಹೆಬ್ಬಾಳ್ಕರ್ ಇದೊಂದು ಸೌಹಾರ್ದಯುತವಾದ ಭೇಟಿ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ.
ಬುಧವಾರ ಬೆಳಿಗ್ಗೆ ಮಾಜಿ ಸಿಎಂ ಬಿಎಸ್ವೈ ಮನೆಗೆ ಭೇಟಿ ನೀಡಿದ ಶಾಸಕಿ ಹೆಬ್ಬಾಳ್ಕರ್ ರಾಜಾಹುಲಿ ಜೊತೆ ಕೆಲಹೊತ್ತು ಚರ್ಚೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಇವರು. ಸಮಾಜಕ್ಕಾಗಿ ಜೀವನ ಸವೆಸಿದ ಹಿರಿಯರನ್ನು ಭೇಟಿ ಮಾಡಿ ಗುರುಪೂರ್ಣಿಮೆಯ ಶುಭಾಶಯ ತಿಳಿಸಿ ಆಶಿರ್ವಾದ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಬೇಕು ಎಂಬ ವಿಚಾರವಾಗಿ ಮಾಜಿ ಸಿಎಂ ಗಮನಕ್ಕೆ ತರಲಾಗಿದ್ದು, ಬೇರೆ ಸಮುದಾಯಕ್ಕೆ ತೊಂದರೆ ಆಗದಂತೆ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ನೂ ಸಿದ್ದರಾಮೋತ್ಸವ ಕುರಿತು ಮಾತನಾಡಿದ ಇವರು. ಸಿದ್ದರಾಮಯ್ಯ ಅವರ ಎಪ್ಪತ್ತೈದನೇ ವರ್ಷದ ಹುಟ್ಟು ಹಬ್ಬ ಆಚರಣೆ ನಡೆಯುತ್ತಿದ್ದು ಆ ಕಮೀಟಿಯಲ್ಲಿ ನಾನು ಇದ್ದೇನೆ ಎಂದರು. ಜೊತೆಗೆ ಶಿವಕುಮಾರೋತ್ಸವ ಕುರಿತು ಯಾವುದೇ ಪ್ರತಿಕ್ರಿಯೆ ಶಾಸಕಿ ಹೆಬ್ಬಾಳ್ಕರ್ ನೀಡಿಲ್ಲ.