ಜಾತಿ ಲೇಪನ ಪಡೆದುಕೊಂಡ ಕನ್ನಡ ಮರಾಠಿ ನಡುವಿನ ಸಮರ – ವ್ಯವಸ್ಥಿತ ಸಂಚಿಗೆ ಕನ್ನಡ ಹೋರಾಟಗಾರರು ಬಲಿ
ಬೆಳಗಾವಿ : ಬೆಳಗಾವಿ ಕನ್ನಡ ಹೊರಾಟ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಕನ್ನಡ ಮರಾಠಿ ನಡುವಿನ ಸಮರಕ್ಕೆ ಜಾತಿ ಲೇಪನ ಬಳಿಯುವ ಕೆಲಸ ನಡೆಯುತ್ತಿದ್ದು, ನಿಷ್ಠಾವಂತ ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡುವಂತ ಘಟನೆಗಳು ನಡೆಯುತ್ತಿರುವುದು ವಿಷಾದನೀಯ.
ಕನ್ನಡ ಬಾವುಟ ಹಿಡಿದ ಯುವಕನ ಮೇಲೆ ಪೊಲೀಸ್ ಅಧಿಕಾರಿಗಳು ಹಲ್ಲೆ ಮಾಡಿದ್ದನ್ನು ಆರೋಪಿಸಿ ಯುವಕ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದ. ಯುವಕನಿಗೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ಕನ್ನಡಪರ ಸಂಘಟನೆ ಸದಸ್ಯರು ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಿರಂತರ ಪ್ರತಿಭಟನೆ ನಡೆಸುತ್ತಿವೆ.
ಈ ಮಧ್ಯೆ ಕೆಲವರು ಡಿಸಿಪಿ ರಕ್ಷಣೆಗೆ ನಿಂತುಕೊಂಡು ಕನ್ನಡ ಮರಾಠಿ ಹೋರಾಟಕ್ಕೆ ಜಾತಿ ಲೇಪನ ಮಾಡುತ್ತಿದ್ದು ಭಾಷಾ ಹೋರಾಟ ಹಾಗೂ ಬೆಳಗಾವಿ ಕನ್ನಡ ಅಸ್ಮಿತೆಗೆ ದೊಡ್ಡ ಪೆಟ್ಟು ನೀಡುತ್ತಿರುವುದು ಸ್ಪಷ್ಟ. ಈ ಹಿಂದೆ ಕನ್ನಡ ಹೋರಾಟದ ವಿಷಯದಲ್ಲಿ ಬೆಳಗಾವಿ ಹೋರಾಟಗಾರರು. ಯಾವತ್ತೂ ಜಾತಿ ಲೆಕ್ಕಾಚಾರ ಹಾಕಿದವರಲ್ಲ. ಮನೆ ಮಠ ಬಿಟ್ಟು ಕನ್ನಡ ಕಾಯುವ ಕೆಲಸ ಮಾಡುತ್ತಿದ್ದರು. ಇದೆ ಮೊದಲಬಾರಿಗೆ ಈ ರೀತಿಯ ಘಟನೆ ನಡೆದಿದೆ.
ಎಸಿಪಿ ಬೆಂಬಲಕ್ಕೆ ಯಾರು : ಬಾವುಟ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕ ಪೊಲೀಸ್ ಇಲಾಖೆ ಮೇಲೆ ಗಂಭೀರ ಆರೋಪ ಮಾಡಿದ್ದರು ಈವರೆಗೂ ಯಾವುದೇ ಕ್ರಮ ಆಗಿಲ್ಲ. ಈ ಮಧ್ಯೆ ಎಸಿಪಿ ಆಡಿಯೊ ಒಂದು ವೈರಲ್ ಆಗುತ್ತಿದೆ. ಇದರಂದ ವ್ಯವಸ್ಥಿತವಾಗಿ ಎಸಿಪಿ ಅವರ ಬೆಂಬಲಕ್ಕೆ ಯಾರು ಬರದೆ ಕೆಲವರನ್ನು ಬಲಿಪಶು ಮಾಡುವ ಲೆಕ್ಕಾಚಾರ ನಡೆದಿದೆ ಎಂಬುದು ಸಧ್ಯಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.