
ಜಾತಿ ಜಗಳಕ್ಕೆ ವೇದಿಕೆ ಮಾಡಿಕೊಟ್ಟ ಬೆಳಗಾವಿ ಖಾಕಿ – ಪಂಚಮಸಾಲಿ ಜಗದ್ಗುರುಗಳ ಖಡಕ್ ಎಚ್ಚರಿಕೆ

ಬೆಳಗಾವಿ : ಕನ್ನಡ ನಾಡು, ನುಡಿ ರಕ್ಷಣೆ ಕುರಿತಾಗಿ ಜಾತಿ ಮರೆತು ಒಂದುಗೂಡಿ ಕೆಲಸ ಮಾಡುವ ಹೋರಾಟಗಾರರ ಮಧ್ಯೆ ಸದ್ಯ ಜಾತಿ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಇದರ ನಡುವೆ ಕನ್ನಡಪರ ಯುವ ಹೋರಾಟಗಾರ ಸಂಪತ್ ವಿರುದ್ಧ ಅನವಶ್ಯಕ ಟಾರ್ಗೆಟ್ ಮಾಡಿದರೆ ಬೆಳಗಾವಿ ಚಲೋ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಯುವ ಸಂಪತ್ ಕುಮಾರ್ ದೇಸಾಯಿ ವಿರುದ್ಧ ಜಾತಿ ನಿಂದನೆ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಸದ್ಯ ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಯುವಕನ ಪರ ಧ್ವನಿ ಎತ್ತಿದ್ದು ಕನ್ನಡ ಕೆಲಸ ಮಾಡುತ್ತಿರುವ ಈತನನ್ನು ಅನವಶ್ಯಕ ಟಾರ್ಗೆಟ್ ಮಾಡಿದರೆ ಬೆಳಗಾವಿ ಚಲೋ ಮಾಡುವುದಾಗಿ ಎಚ್ಚರಿಸಿದ್ದಾರೆ.