ಹಳೆ ವೈಷಮ್ಯ, ಒಡಹುಟ್ಟಿದ ತಮ್ಮನಿಂದಲೇ ಅಣ್ಣನ ಬರ್ಬರ ಕೊಲೆ
ಚಿಕ್ಕೋಡಿ: ಹಳೆ ವೈಷಮ್ಯದ ಹಿನ್ನಲೇಯಲ್ಲಿ ಒಡಹುಟ್ಟಿದ ತಮ್ಮನಿಂದಲೇ ತನ್ನ ಅಣ್ಣನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ಸಂಜೆ ಪಟ್ಟಣದ ಹೊರವಲಯದಲ್ಲಿ ಉಮರಾಣಿ ಕಣಿವೆ ಹತ್ತಿರ ನಿಪ್ಪಾಣಿ-ಮುಧೋಳ ರಸ್ತೆಯಲ್ಲಿ ನಡೆದಿದೆ.
ಕಾರಿನಲ್ಲಿ ಫಾಲೊ ಮಾಡಿಕೊಂಡು ಬಂದು ಕೊಲೆ ಮಾಡಲಾಗಿದೆ.
ಕೊಲೆಯಾದವನನ್ನು ಡಂಬಳಕೂಟದ ನಿವಾಸಿ ಅಕ್ಬರ ಶೇಖ(40). ಎಂದು ಗುರುತಿಸಲಾಗಿದೆ.ಅಕ್ಬರ ಶೇಖ ಇತ ಬ್ಯಾಕ್ಟೀರಿಯಾ ಅಂಗಡಿ ನಡೆಸುತ್ತಿದ್ದನು.ಕೊಲೆಯಾದ ಅಕ್ಬರ ಇತ ಮಧ್ಯಾಹ್ನ ಕಬ್ಬೂರದಿಂದ ಚಿಕ್ಕೋಡಿಗೆ ಬೈಕ್ ಮೇಲೆ ಆಗಮಿಸುತ್ತಿರುವಾಗ ಕಾರಿನಲ್ಲಿ ಬೈಕ್ ಹಿಂಬಾಲಿಸಿಕೊಂಡು ಬಂದು ಆರೋಪಿ ಅಮ್ಮಜಾದ ಶೇಖ(38) ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.ಈ ಕುರಿತು ಚಿಕ್ಕೋಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕೊಲೆಯಾದ ಸ್ಥಳಕ್ಕೆ ಪಿಎಸ್ ಐ ಯಮನಪ್ಪಾ ಮಾಂಗ ಹಾಗೂ ಸಿಬ್ಬಂದಿಗಳು ಭೆಟ್ಟಿ ನೀಡಿ ಪರಿಶೀಲನೆ ನಡೆಸಿದರು.ಇನ್ನು ತನಿಖೆಯಿಂದಷ್ಟೇ ಕೊಲೆಗೆ ನಿಖರವಾದ ಕಾರಣ ತಿಳಿದು ಬರಲಿದೆ.