Select Page

ಧ್ವಜ ಹಿಡಿದ ಯುವಕನ ಮೇಲೆ ಪೊಲೀಸ್ ಹಲ್ಲೆ ಪ್ರಕರಣ : ತನಿಖೆ ಕುರಿತು ಏನು ಹೇಳಿದ್ರು ಐಜಿಪಿ

ಧ್ವಜ ಹಿಡಿದ ಯುವಕನ ಮೇಲೆ ಪೊಲೀಸ್ ಹಲ್ಲೆ ಪ್ರಕರಣ : ತನಿಖೆ ಕುರಿತು ಏನು ಹೇಳಿದ್ರು ಐಜಿಪಿ

ಬೆಳಗಾವಿ : ಕನ್ನಡ ಧ್ವಜ ಹಿಡಿದು ನೃತ್ಯ ಮಾಡಿದ್ದ ಯುವಕನ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಲಯ ಐಜಿಪಿ ತನಿಖೆ ನಡೆಸುವಂತೆ ಎಡಿಜಿಪಿ ಅಲೋಕ್ ಕುಮಾರ ಆದೇಶಿಸಿದ್ದರು.‌

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ವಲಯ ಐಜಿಪಿ ಎನ್ ಸತೀಶಕುಮಾರ. ಧ್ವಜ ಹಿಡಿದಿದ್ದ ಯುವಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ತನಿಖೆ ಮುಂದುವರಿದಿದೆ. ಈಗಾಗಲೇ ಕಲವರ ವಿಚಾರಣೆ ಆಗಿದ್ದು ಹೇಳಿಕೆ ಪಡೆಯಲಾಗಿದೆ. ಈ ಕುರಿತು ವಿಚಾರಣೆ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದರು.‌

ಒಟ್ಟಿನಲ್ಲಿ ಧ್ವಜ ಗಲಾಟೆಯಾಗಿ ಹದಿನೈದು ದಿನ ಕಳೆದರು ಈ ವರೆಗೂ ತಪ್ಪಿತಸ್ಥರ ಮೇಲೆ ಕ್ರಮ ಆಗದಿರುವುದು ಒಂದುಕಡೆಯಾದರೆ, ಐಜಿಪಿ ಮಟ್ಟದ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರುವ ನಿರೀಕ್ಷೆಯಲ್ಲಿ ಕನ್ನಡಿಗರಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!