Select Page

Advertisement

ಕದ್ದ ಮಾಲು ವಾರಸುದಾರರ ಪಾಲು : ಬೆಳಗಾವಿ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಕದ್ದ ಮಾಲು ವಾರಸುದಾರರ ಪಾಲು : ಬೆಳಗಾವಿ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಬೆಳಗಾವಿ : ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಸುಮಾರು 17 ಕೋಟಿ 54 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಹಾಗೂ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಂಡು ನಿರಾಶ್ರಿತರಿಗೆ ಮರಳಿ ನೀಡುವ ಮೂಲಕ ಬೆಳಗಾವಿ ಜಿಲ್ಲಾ ಪೊಲೀಸರ ಮಹತ್ವದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಪ್ರಸ್ತುತ ವರ್ಷದಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಯಲ್ಲಿ ನಡೆದ ಕಳ್ಳತನ ಸೇರಿದಂತೆ 201 ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಶಪಡಿಸಿಕೊಂಡ ಕೋಟ್ಯಾಂತರ ಮೌಲ್ಯದ ಸಾಮಗ್ರಿಗಳನ್ನು ಶುಕ್ರವಾರ ನಗರದ ಎಸ್ಪಿ ಮೈದಾನದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ವಲಯ ಐಜಿಪಿ ಎನ್ ಸತೀಶಕುಮಾರ. ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಅವರ ನಿರ್ದೇಶನದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಮಹತ್ವ ಕಾರ್ಯ ಮಾಡುತ್ತಿದ್ದಾರೆ. ಕಳ್ಳತನವಾದ ಕೋಟ್ಯಾಂತರ ರೂ ಮೌಲ್ಯದ ವಸ್ತುಗಳನ್ನು ವಾರಸುದಾರಿಗೆ ನೀಡಿದ್ದರಿಂದ ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ಗೌರವ ಹೆಚ್ಚಿಸುತ್ತದೆ ಎಂದರು.

ವಿವಿಧ ಪ್ರಕರಣಗಳಲ್ಲಿ 4 ಕೋಟಿ 18 ಲಕ್ಷ ಮೌಲ್ಯದ 8 ಕೆಜಿ,369 ಗ್ರಾಂ ಬಂಗಾರದ ಆರಣಗಳು, 4.91 ಲಕ್ಷ ಮೌಲ್ಯದ 7 ಕೆಜಿ. 23 ಗ್ರಾಂ ಬೆಳ್ಳಿಯ ಆರಭರಣಗಳು, 1.24 ಕೋಟಿಗೂ ಅಧಿಕ ಮೌಲ್ಯದ 250 ದ್ವಿಚಕ್ರ ವಾಹನಗಳು, 3.99 ಕೋಟಿ ಮೌಲ್ಯದ 24 ದೊಡ್ಡ ವಾಹನಗಳು, 59.62 ಲಕ್ಷ ಮೌಲ್ಯದ 15 ಮೊಬೈಲ್ ಹಾಗೂ 120 ಇನ್ನೀತರ ವಸ್ತುಗಳು ಹಾಗೂ 7 ಕೋಟಿ 47 ಲಕ್ಷ ರೂ. ನಗದು ಸೇರಿದಂತೆ ಒಟ್ಟು 17.54 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಷ್ಟಪಟ್ಟು ಬೆವರು ಹರಿಸಿ ಅನೇಕ ಕನಸು ಹೊತ್ತ 33 ಗ್ರಾಂ ಭಂಗಾರದ ಆಭರಣ ಕಳುವಾದಾಗ ತುಂಬಾ ನೋವು ಉಂಟಾಗಿತ್ತು.‌ ಬಡತನದಲ್ಲಿಯೂ ಭವಿಷ್ಯಕ್ಕೆ ಅನುಕೂಲವಾಗುವುದೆಂದು ಬಂಗಾರದ ಒಡವೆ ಮಾಡಿಸಿದ್ದರೆ ಅದು ಕಳುವಾಗಿತ್ತು. ಆದರೆ ಪೊಲೀಸರು ವಾಪಸ್ ನಮ್ಮ ಒಡವೆ ಬರುವಂತೆ ಮಾಡಿದ್ದು ಸಂತೋಷ ನೀಡಿದೆ.

ಅಶೋಕ ಬೈರು ಪಾವಲೆ
ನಿಪ್ಪಾಣಿ ನಿವಾಸಿ

***********

ಜಿಲ್ಲೆಯಲ್ಲಿ ಅಪರಾಧ ಪ್ರಕರಣ ತಡೆಗಟ್ಟಲು ಪೊಲೀಸ್ ಇಲಾಖೆ ಸರ್ವರೀತಿಯಲ್ಲೂ ತನ್ನ ಕಾರ್ಯ ಮಾಡುತ್ತಿದೆ. ಈ ವರ್ಷದಲ್ಲಿ ನಡೆದ ಕಳ್ಳತನ ಪ್ರಕರಣ ಪತ್ತೆಹಚ್ಚಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಾಪಸ್ ವಾರಸುದಾರಿಗೆ ನೀಡಲಾಗಿದೆ. ಅತ್ಯಂತ ಕಷ್ಟಕರ ಪ್ರಕರಣಗಳನ್ನು ಬೇಧಿಸಿ ಚಾಣಾಕ್ಷತೆ ಮೆರೆದ ನಮ್ಮ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ.

ಡಾ. ಸಂಜೀವ್ ಪಾಟೀಲ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Advertisement

Leave a reply

Your email address will not be published. Required fields are marked *