ಜೆಡಿಎಸ್ ಗೆ ಭೀಮಪ್ಪ ಗಡಾದ್ ಗುಡ್ ಬೈ – ಅರಭಾವಿಯಲ್ಲಿ ರಾಜಕೀಯ ಸಂಚಲನ
ಅರಭಾವಿ : ರಾಜ್ಯ ರಾಜಕಾರಣದಲ್ಲಿ ಇನ್ನೇನು ಚುನಾವಣಾ ಪರ್ವ ಆರಂಭವಾಗಲಿದ್ದ ಈಗಾಗಲೇ ನಾಯಕರು ಗೆಲುವಿಗೆ ಸರ್ಕಸ್ ನಡೆಸುತ್ತಿದ್ದಾರೆ. ಜಾರಕಿಹೊಳಿ ಸಹೋದರರಲ್ಲಿ ಒಬ್ಬರಾಗ ಬಾಲಚಂದ್ರ ಜಾರಕಿಜೊಳಿ ಪ್ರತಿನಿಧಿಸುವ ಅರಭಾವಿ ಮತಕ್ಷೇತ್ರದಲ್ಲಿ ರಾಜಕೀಯ ಸಂಚಲನ ಉಂಟುಮಾಡುವ ಸಾಧ್ಯತೆ ದಡ್ಡವಾಗಿದೆ.
ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ್ ಜೆಡಿಎಸ್ ತೊರೆದಿದ್ದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಹಿಂದೆ ತಾವು ಅನೇಕ ಪಕ್ಷಗಳ ಜೊತೆಗೂಡಿ ಬಾಲಚಂದ್ರ ಜಾರಕಿಹೊಳಿ ಅವರ ಪ್ರಬಲ ಎದುರಾಳಿ ಆಗಿದ್ದಂತು ಸತ್ಯ. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ.
ಇತ್ತಿಚಿನ ಕೆಲವು ದಿನಗಳಿಂದ ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರ್ಪಡೆ ವಿಚಾರ ದಟ್ಟವಾಗಿ ಹಬ್ಬಿತ್ತು. ಈ ಕುರಿತು ಕಲವು ಸುತ್ತಿನ ಮಾತುಕತೆ ನಡೆದಿದ್ದು ಎಂದು ಹೇಳಲಾಗುತ್ತಿತ್ತು. ಇದೆಲ್ಲದಕ್ಕೆ ಪುಷ್ಟಿ ನೀಡುವಂತೆ ಅರಭಾವಿ ಮತಕ್ಷೇತ್ರದ ಪ್ರಭಲ ಅಭ್ಯರ್ಥಿ ಹಾಗೂ ಬಾಲಚಂದ್ರ ಜಾರಕಿಹೊಳಿ ಪ್ರತಿಸ್ಪರ್ಧಿ ಭೀಮಪ್ಪ ಗಡಾದ್ ಜೆಡಿಎಸ್ ತೊರೆದಿದ್ದಾರೆ.
ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇವರು. ಜೆಡಿಎಸ್ ಪಕ್ಷದಲ್ಲಿ ನನ್ನ ರಾಜಕೀಯ ಭವಿಷ್ಯದ ಕುರಿತು ಪ್ರಶ್ನೆ ಮೂಡಿಸುವ ಬೆಳವಣಿಗೆ ನಡೆಯುತ್ತಿದ್ದು ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.