
ಹಲ್ಲೆ ನಡೆಸಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಹೊರಟರಾ ಡಿಸಿಪಿ ? – ಪೋನ್ ಸಂಭಾಷಣೆ ವೈರಲ್

ಬೆಳಗಾವಿ : ನಗರದ ಗೋಗಟೆ ಮಹಾವಿದ್ಯಾಲಯದಲ್ಲಿ ನಡೆದಿದ್ದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಿಡಿದು ನೃತ್ಯ ಮಾಡಿದ್ದ ಯುವಕನ ಮೇಲೆ ಪೊಲೀಸ್ ಅಧಿಕಾರಿ ಡಿಸಿಪಿ ರವೀಂದ್ರ ಗಡಾದಿ ಮಧ್ಯರಾತ್ರಿ ಹಲ್ಲೆ ನಡೆಸಿದ್ದಾಗಿ ಸ್ವತಃ ಹಲ್ಲೆಗೊಳಗಾದ ಯುವಕನೇ ಆರೋಪಿಸಿದ್ದ.
ಕೇವಲ ಆರೋಪ ಮಾತ್ರ ಮಾಡದೆ ಬುಧವಾರ ಯುವಕನನ್ನು ಬೂಟುಗಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಕಪಾಳಕ್ಕೆ ಹೋಡೆದಿದ್ದಾರೆ ಎಂಬ ಆರೋಪವನ್ನು ಯುವಕ ಮಾಡಿದ್ದರ ಮೊದಲು ನಗರದ ಜಿಲ್ಲಾಸ್ಪತ್ರೆಗೆ ತೆರಳಿ ಎಮ್ ಎಲ್ ಸಿ ಮಾಡಿಸಿ ವೈದ್ಯಕೀಯ ಪ್ರಮಾಣಪತ್ರ ಪಡೆದುಕೊಂಡು ಬಂದಿದ್ದರು.
ಇಷ್ಟೆಲ್ಲ ಘಟನೆ ನಡೆದರು ಡಿಸಿಪಿ ಮಾತ್ರ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಮುಂದಾದ್ರಾ ಎಂಬ ಮಾತು ಕೇಳಿಬರುತ್ತಿವೆ. ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪ ಮಾಡಿದ ವಿದ್ಯಾರ್ಥಿಗೆ ಸರ್ಕಾರ ಸೂಕ್ತ ನ್ಯಾಯ ನೀಡುತ್ತದೆಯಾ ಎಂಬುದನ್ನು ಕಾದು ನೋಡಬೇಕು.
ಕನ್ನಡದ ವಿಷಯದಲ್ಲಿ ಡಿಸಿಪಿ ಗಡಾದಿ ಮೇಲೆ ನೋಂದ ವಿದ್ಯಾರ್ಥಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕರವೇ ರಾಜಾಧ್ಯಕ್ಷ ಶಿವರಾಮೇಗೌಡ ಹಾಗೂ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವರಾಮೇಗೌಡ: ಹಲೋ.. ಹಲೋ.. ಹಲೋ.. ಸರ್.. ನಮಸ್ಕಾರಾ ನಾನು ಬೆಂಗಳೂರಿನಿಂದ ಶಿವರಾಮೇಗೌಡ ಮಾತನಾಡ್ತಿದ್ದೇನೆ ಸರ್.
ಪೊಲೀಸ್ ಅಧಿಕಾರಿ: ಹೇಳಿ ಸರ್
ಶಿವರಾಮೇಗೌಡ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ಮಾತನಾಡೋದು. ಸ್ವಲ್ಪ ಕನ್ನಡದ ಬಾವುಟದಲ್ಲಿ ಗೊಂದಲಗಳು ಆಗ್ತಿದ್ದವ್ವಲ್ಲ ಸರ್ ಬೆಂಗಳೂರಿನಲ್ಲಿ ಅದರ ಬಗ್ಗೆ ಮಾಹಿತಿ ಬೇಕಿತ್ತಲ್ಲ.
ಪೊಲೀಸ್ ಅಧಿಕಾರಿ: ಇಲ್ಲಾ ಅದೇಲ್ಲ ಗೊಂದಲ ಸೃಷ್ಟಿಯಾಗಿತ್ತು. ಆಕ್ಚುಲಿ ಆಗಿದ್ದೆ ಬೇರೆ ಇದ್ದೀದ್ದೆ ಬೇರೆ.
ಶಿವರಾಮೇಗೌಡ: ಅದೇನೋ ಬಾವುಟ ತೆಗೆದು***ಯಲ್ಲಿ ಇಟ್ಕೊ ಅಂದ್ರಿ ಅಂತೆ. ಆ ಮಾತು ಇಲ್ಲಿ ಜಾಸ್ತಿ ವಿಷಯ ಮುನ್ನಲೆಗೆ ಬಂದಿದೆ.
ಪೊಲೀಸ್ ಅಧಿಕಾರಿ: ಅರ್ಥಾ ಆಗ್ತಿದೆ.. ಅರ್ಥಾ ಆಗ್ತಿದೆ.
ಶಿವರಾಮೇಗೌಡ: ಅಂಥಾ ಮಾತು ಆಡಿರೋದು ನಿಜಾನಾ ಸರ್ ಅದು.
ಪೊಲೀಸ್ ಅಧಿಕಾರಿ: ಇಲ್ಲಾ.. ಆ ಥರ ಇಲ್ಲ
ಶಿವರಾಮೇಗೌಡ : ಇಲ್ಲಾ ಸರ್ ಆ ರೀತಿ ಇದ್ದರೆ ನಾವು ಬೆಳಗಾವಿಗೆ ಬರುತ್ತೇವೆ. ಮಾಹಿತಿ ತೊಗೊತ್ತೇವೆ. ಗಡಿ ಭಾಗದಲ್ಲಿ ಕನ್ನಡ ಅಸ್ಮೀತೆ ಬಗ್ಗೆ ಕನ್ನಡ ಹೋರಾಟಗಾರರು ದಿನ ನಿತ್ಯ ಅರಿವು ಮೂಡಿಸುತ್ತಿದ್ದೇವೆ. ನಮ್ಮ ಅಧಿಕಾರಿಗಳಾಗಿ ನಮಗೆ ರಕ್ಷಣೆ ಕೊಡದೆ ಕನ್ನಡ ಧ್ವಜ ಹಾರಿಸಿದವರಿಗೆ ಹೊಡಿಯೋದು, ಬೈಯೋದು, ಕನ್ನಡದ ಧ್ವಜಾ * ಇಟ್ಕೊ ಅನ್ನೋದು ಎಷ್ಟರ ಮಟ್ಟಿಗೆ ಸರಿ ಸರ್.
ಪೊಲೀಸ್ ಅಧಿಕಾರಿ: ಅದೇಲ್ಲ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಆಗಿತ್ತು. ಇವತ್ತು ಕನ್ನಡಪರ ಹೋರಾಟಗಾರರು ಹೋರಾಟ ಮಾಡಿದ ಮೇಲೆ ಅಕ್ಚೂಲಿ ಅವರಿಗೆ ಅದು ಏನಾಗಿದೆ ಎಂದು ಅವರಿಗೂ ಗೊತ್ತಾಯ್ತು.
ಶಿವರಾಮೇಗೌಡ: ನಿಮ್ಗೆ ಗೊತ್ತಿರಬಹುದು ಸರ್ ಬೆಳಗಾವಿಯಲ್ಲಿ ನಡೆಯುವ ಘಟನೆಗೆ ಬೆಂಗಳೂರಿನಲ್ಲಿ ಜಾಗೃತಿ ಮೂಡಿಸಲು ಹೋರಾಟ ಮಾಡ್ತಾರೆ. ಆದ್ರೆ ಅಲ್ಲಿರುವ ನಮ್ಮ ಅಧಿಕಾರಿಗಳು, ಕರ್ನಾಟಕ ಪೊಲೀಸ್ ಅಧಿಕಾರಿಗಳು ಕನ್ನಡ ಹೋರಾಟಗಾರರ ನಡುವೆ ಭಾವನಾತ್ಮಕ ಸಂಬಂಧ ಇದೆ.ಎಲ್ಲೋ ಒಂದು ರೀತಿ ಮಾತನಾಡುವ ಪೊಲೀಸ್ ಅಧಿಕಾರಿಗಳು ಕನ್ನಡದ ಬಾವುಟದ ಬಗ್ಗೆ ಮಾತನಾಡಿರುವುದು ಒಂದು ಕಪ್ಪು ಚುಕ್ಕೆ ಸರ್ ಅದು.
ಪೊಲೀಸ್ ಅಧಿಕಾರಿ: ನಮ್ಮ ರಕ್ತ ಕೂಡ ಅದೇ ಇದೆ.
ಶಿವರಾಮೇಗೌಡ: ಸರ್ ಪೊಲೀಸರು ಕನ್ನಡ ಹೋರಾಟಗಾರರ ಪರವಾಗಿ ನಿಂತಿದ್ದಾರೆ. ಆದರೆ ಇಂಥ ಪೊಲೀಸ್ ಅಧಿಕಾರಿಯ ಮಾತು ಇದೇಯಲ್ಲ ಸರ್.. ಕನ್ನಡದ ಬಾವುಟನಾ ***ಯಲ್ಲಿ ತಿರುಗಿಸ್ತೇನೆ ಎನ್ನುವುದು ಅದು ಭಾವನಾತ್ಮಕವಾಗಿ ತುಂಬಾ ಪ್ರಚೋಧನಕಾರಿಯಾಗಿದೆ ಸರ್ ಅದು ಪಚೋಧನಕಾರಿಯಾಗಿದೆ ಅದು. ಅದಕ್ಕೊಸ್ಕರ ತಮ್ಮಲ್ಲಿ ಅದು ನಿಜಾನಾ ಏನೋ ಅನ್ನೋದಕ್ಕೆ ಫೋನ್ ಮಾಡಿದ್ವಿ ಸರ್.
ಪೊಲೀಸ್ ಅಧಿಕಾರಿ: ಅದನ್ನೆ ಆತರ ಬೆಳಗ್ಗೆ, ಬೆಳಗ್ಗೆ ಏನೂ ಸ್ಪ್ರೇಡ್ ಆಗಿದೆ ಅಲ್ಲ ಅದರ ಪ್ರಕಾರನೇ. ಸಂಘಟನೆಗಳು ಇವತ್ತು ಪ್ರತಿಭಟನೆ ಮಾಡಿ ಆಯ್ತು. ಅದಾದ ಮೇಲೆ ಜಿಲ್ಲಾ ಅಧ್ಯಕ್ಷರು ಮೇಲಾಧಿಕಾರಿಯೊಂದಿಗೆ ಮಾತನಾಡಿದ್ರು. ಅದು ರೋಮರ್ ತರ ಆಗಿ ಹೋಗಿದೆ.
ಶಿವರಾಮೇಗೌಡ: ರೋಮರ್ ತರ ಆಗಿ ಹೋಗಿದ್ರೆ ಸಂತೋಷ ಸರ್. ಆದ್ರೆ ನಿಜಾ ಆದ್ರೆ ಗಡಿ ಭಾಗದಲ್ಲಿ ಬೆಳಗಾವಿಯಲ್ಲಿ ಸಾಕಷ್ಟು ಬಾರಿ ಬಂದು ಹೋರಾಟ ಮಾಡಿದ್ದೇವೆ. ಅದೇನಪ್ಪ ನಮ್ಮ ಗಡಿಭಾಗದ ಅಧಿಕಾರಿಗಳು ನಮಗೆ ಈ ರೀತಿ ಮಾತನಾಡ್ತಾರಲ್ಲ ಅಂಥ ಸ್ವಲ್ಪ ನೋವಾಯ್ತು..
ಪೊಲೀಸ್ ಅಧಿಕಾರಿ: ಇಲ್ಲಾ.. ಇಲ್ಲಾ.. ಖಂಡಿತ ಇಲ್ಲ. ನಾವು ಅಪ್ಪಟ ಕನ್ನಡಿಗರ ಪರ ಇದ್ದೇವೆ.
ಶಿವರಾಮೇಗೌಡ: ಇದ್ದಾರೆ ಸರ್ ಹಿಂದೆ ಸೋನಿಯಾ ನಾರಂಗ ಇದ್ದ ಕಾಲದಿಂದಲೂ ಕನ್ನಡ ಹೋರಾಟಗಾರರಿಗೆ ಯಾವ ರೀತಿ ಪೊಲೀಸ್ ಅಧಿಕಾರಿಗಳು ಸಹಕಾರ ಕೊಟ್ಟಿದ್ದಾರೆ. ಕನ್ನಡ ಹೋರಾಟ ಬಲವಾಗಿರಲು ಪೊಲೀಸ್ ಇಲಾಖೆಯೇ ಕಾರಣ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಈ ರೀತಿಯ ಅಧಿಕಾರಿಗಳು ಈ ರೀತಿ ಪದ ಬಳಸ್ತಾರಲ್ಲ ತುಂಬಾ ಕನ್ನಡಿಗರ ಭಾವನೆಗೆ ಧಕ್ಕೆ ತರುವಂಥದ್ದು ಸರ್ ಅದು.
ಪೊಲೀಸ್ ಅಧಿಕಾರಿ: ಇಲ್ಲಾ ಹದಿನೈದು ವರ್ಷಗಳಿಂದ ಕನ್ನಡ ಸಂಘಟನೆಯ ಬೆಂಬಲ ಕೊಡುವಲ್ಲಿ ಅಧಿಕಾರಿಗಳು ನಿಂತಿದ್ದಾರೆ.
ಶಿವರಾಮೇಗೌಡ: ಅದೇ.. ಅದೇ..ಹಿಂದೆನೂ ಇಂದಿಗೂ ಬೆಳಗಾವಿ ಅಸ್ಮೀತೆ ಕಾಪಾಡುವಲ್ಲಿ ಪೊಲೀಸರು ಕರ್ನಾಟಕದ ಪರವಾಗಿ ಕನ್ನಡಿಗರ ಪರವಾಗಿ ಸದಾ ನಿಂತಿವೆ. ಆದರೆ ಈಗ ಕನ್ನಡ ಬಾವುಟ ಹಾರಿಸಿದವರಿಗೆ ಹೊಡಿತ್ತಾರೆ ಅಂದ್ರೆ. ಅದು ಎಷ್ಟರ ಮಟ್ಟಿಗೆ ಸರಿ ಸರ್ ಅದು ಅದ್ಕೊಸ್ಕರ್.
ಪೊಲೀಸ್ ಅಧಿಕಾರಿ: ಆತರಾ ಆಗಿಲ್ಲ ಅದು.
ಶಿವರಾಮೇಗೌಡ: ದಯವಿಟ್ಟು ಆ ರೀತಿ ಆಗಬಾರದು ಸರ್ ತಪ್ಪು ಯಾರು ಮಾಡಿದ್ರೂ ತಪ್ಪು. ಕನ್ನಡದ ಅಸ್ಮೀತೆ ಎತ್ತಿ ಹಿಡಿಯುವವರ ಮೇಲೆ ಧಮನ ಮಾಡುವ ಕೆಲಸ ಯಾರೂ ಮಾಡಬಾರದು ಸರ್. ಮುಖ್ಯಮಂತ್ರಿ ಆದಿಯಾಗಿ ಕರ್ನಾಟಕದಲ್ಲಿ ಕನ್ನಡಿಗರಿಗಿಂತ ಯಾರೂ ದೊಡ್ಡವರಲ್ಲ ಸರ್.
ಪೊಲೀಸ್ ಅಧಿಕಾರಿ: ಸಾವಿರ ಸಾವಿರ ಸಂಖ್ಯೆಯಲ್ಲಿ ಎಷ್ಟು ಜನ ಬೆಂಬಲಕ್ಕೆ ನಿಂತಿದ್ದಾರೆ ಅಂಥ ನಮಗೆ ಗೊತ್ತಿದೆ. ಎಲ್ಲಾ ಟೈಮ್ ನಲ್ಲಿಯೂ ನೋಡಿದ್ದೇವೆ.
ಶಿವರಾಮೇಗೌಡ: ಕನ್ನಡಿಗರಿಗೆ ಧಕ್ಕೆ ತರುವ ಕೆಲಸ ಮಾಡಬಾರದು ಸರ್.
ಪೊಲೀಸ್ ಅಧಿಕಾರಿ: ಚಾನ್ಸೇ ಇಲ್ಲ..
ಶಿವರಾಮೇಗೌಡ: ಧನ್ಯವಾದಗಳು ಸರ್.
ಪೊಲೀಸ್ ಅಧಿಕಾರಿ: ನಮಸ್ಕಾರ.. ನಮಸ್ಕಾರ್