ಸ್ವಂತಕ್ಕಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ತತ್ವ ಅನುಸರಿಸುತ್ತಿರುವ – ಸತ್ಯಪ್ಪ ಬಾಗೆನ್ನವರ
ಅಥಣಿ : ಒಬ್ಬ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಈ ವ್ಯಕ್ತಿ ಸಮಾಜಪರ ಚಿಂತನೆಗಳೊಂದಿಗೆ ಬೆಳೆದು ಅಥಣಿ ಕ್ಷೇತ್ರದ ರೈತರ ಪಾಲಿಗೆ ಹೆಗಲು ಕೊಡುವ ಮಟ್ಟಿಗೆ ಬೆಳೆದದ್ದು ಅದ್ಬುತ. ನಿರಂತರ ಹೋರಾಟದ ಮೂಲಕ ಜನರ ಕಣ್ಣೀರು ಒರೆಸುತ್ತಿರುವ ಅಥಣಿ ಕ್ಷೇತ್ರದ ಮಣ್ಣಿನ ಮಗ ಸತ್ಯಪ್ಪ ಬಾಗೆನ್ನವರ.
ಹೌದು ಮೂಲತಃ ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಸತ್ಯಪ್ಪ ಬಾಗೆನ್ನವರ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿ, ನಾನಾ ಬಗೆಯ ಸಂಕಷ್ಟಗಳನ್ನು ಅನುಭವಿಸಿದವರು. ಕಬ್ಬು ಕಟಾವು ಮಾಡುವುದರಿಂದ ಹಿಡಿದು, ಟ್ರ್ಯಾಕ್ಟರ್ ಹತ್ತಿ ಕಬ್ಬು ಸಾಗಿಸುವ ಕೆಲಸವನ್ನೂ ಮಾಡಿದವರು. ನಿರಂತರ ಪರಿಶ್ರಮದ ಮೂಲಕ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಮುನ್ನಡೆದ ಇವರ ಬದುಕಿನ ಪುಟಗಳನ್ನು ತಿರುವಿದಷ್ಟು ರೋಚಕ ಸಂಗತಿ ಹೊರಬರುತ್ತವೆ.
ಹೋರಾಟದ ಬದುಕು : ಒಬ್ಬ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಇವರು ಅದೆಷ್ಟೋ ಕಷ್ಟಗಳನ್ನು ನೋಡಿಕೊಂಡು ಬೆಳೆದವರು. ಆದರೆ ಇವರ ನಿರಂತರ ಹೋರಾಟದ ಮನೋಭಾವ ಹಾಗೂ ಜನಪರ ಕಾಳಜಿಯಿಂದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಬಂದಿದ್ದಾರೆ. ತಾಲೂಕಿನ ರೈತರಿಗೆ ಸರ್ಕಾರದಿಂದ ಆಗುತ್ತಿರುವ ಅನ್ಯಾಯ ಹಾಗೂ ದ್ರಾಕ್ಷಿ ಮತ್ತು ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ, ಅನೇಕ ರೀತಿಯಲ್ಲಿ ಹೋರಾಟ ಮಾಡಿ ಸರ್ಕಾರದ ಗಮನಸೆಳೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಕೃಷ್ಣಾ ಸರ್ಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಗುಡುಗಿದ್ದ ಸತ್ಯಪ್ಪ : ಹೌದು ನಿರಂತರ ಹೋರಾಟದ ಮೂಲಕ ಅಥಣಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವ ಇವರ ಗುಣ ಪ್ರತಿಯೊಬ್ಬರಿಗೂ ಇಷ್ಟ. ಈ ಕಾರಣಕ್ಕಾಗಿ ಅವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ವಿರುದ್ಧ ನಿರಂತರ ಹೋರಾಟ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಈಗಲೂ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಕಟ್ಟಾಳು ಈ ಸತ್ಯಪ್ಪಣ್ಣ ಬಾಗೆನ್ನವರ : ಮೌಲ್ಯಾದಾರಿತ ರಾಜಕಾರಣ ಅಳವಡಿಸಿಕೊಂಡ ಸತ್ಯೆಪ್ಪ ಬಾಗೆನ್ನವರ, ಕಾಂಗ್ರೆಸ್ ಪಕ್ಷದ ಕಟ್ಟಾಳು. ನಿರಂತರ ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಎಂ,ಬಿ ಪಾಟೀಲರಂತಹ ದಿಗ್ಗಜ ರಾಜಕಾರಣಿಗಳ ನೀಲಿ ಗಣ್ಣಿನ ಹುಡುಗನಾಗಿರುವ ಇವರನ್ನು ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಇಷ್ಟಪಡುತ್ತಾರೆ.
ಹೌದೊ ಹುಲಿಯಾ ಸಿದ್ದು ಶ್ರೀರಕ್ಷೆ ಸತ್ಯಪ್ಪನವರ ಮೇಲೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಚ್ಚುಮೆಚ್ಚಿನ ಯುವ ನಾಯಕರಲ್ಲಿ ಸತ್ಯೆಪ ಬಾಗೆನ್ನವರ ಕೂಡಾ ಒಬ್ಬರು. ಇವರ ಮೇಲೆ ವಿಶೇಷ ಕಾಳಜಿ ಹೊಂದಿರುವ ಸಿದ್ದರಾಮಯ್ಯನವರಿಗೆ ಇವರ ಹೋರಾಟ ಹಾಗೂ ಪಕ್ಷ ಸಂಘಟನೆ ಶಕ್ತಿ ಮೇಲೆ ಬಲವಾದ ನಂಬಿಕೆ ಇರುವುದು ಸತ್ಯ. ಇವೆಲ್ಲ ಕಾರಣದಿಂದ ಸತ್ಯಪ್ಪ ಬಾಗೆನ್ನವರ ಅವರ ಹೋರಾಟದ ಮೂಲ ಶಕ್ತಿ ಎಂದರೆ ತಪ್ಪಾಗಲಾರದು.
ಅಥಣಿ ಕಾಂಗ್ರೆಸ್ ಅಭ್ಯರ್ಥಿ ರೇಸ್ ನಲ್ಲಿ ಓಡುತ್ತಿರುವ ಕುದುರೆ : ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿರುವ ಮಹೇಶ್ ಕುಮಠಳ್ಳಿ ಅವರ ಪ್ರಭಲ ಎದುರಾಳಿ ಎಂದರೆ ಸತ್ಯಪ್ಪ ಬಾಗೆನ್ನವರ. ಹೌದು ಕಾಂಗ್ರೆಸ್ ಪಕ್ಷದಿಂದ ಮಹೇಶ್ ಅವರ ಗೆಲುವಿಗೆ ಅವಿರತ ಪ್ರಯತ್ನ ಪಟ್ಟವರಲ್ಲಿ ಮೊದಲಿಗರು ಅತ್ಯಪ್ಪ. ಕ್ಷೇತ್ರದಲ್ಲಿ ಶತಾಯ ಗತಾಯ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಅವರನ್ನು ಸೋಲಿಸುವ ಪ್ರತಿಜ್ಞೆ ಮಾಡಿ ಗೆದ್ದವರಲ್ಲ ಸತ್ಯಪ್ಪ ಅವರ ಪಾತ್ರ ಮಹತ್ವದ್ದು.
ಜೊತೆಗೆ ಕಾಂಗ್ರೆಸ್ ಪ್ರಭಾವಿ ಮುಖಂಡರಾದ ಮಾಜಿ ಸಚಿವರಾದ ಎಂ.ಬಿ ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ ಅವರ ಕೃಪಾಕಟಾಕ್ಷೆ ಹೊಂದಿದ್ದಾರೆ ಇವರು. ಈ ಹಿನ್ನಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಅಭ್ಯರ್ಥಿಯಾಗಿ ಸತ್ಯಪ್ಪ ಹೊರ ಹೊಮ್ಮುತ್ತಾರೆ ಎನ್ನುತ್ತದೆ ರಾಜಕೀಯ ವಿಶ್ಲೇಷಣೆ.