ಬೆಳಗಾವಿ : ನಾನು ವೇದಿಕೆ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ವಿಷಯ ಪ್ರಸ್ತಾಪ ಮಾಡಿಲ್ಲ. ಅಷ್ಟಕ್ಕೂ ಪೆಗ್ ಜಾಸ್ತಿ ಅಂದ್ರೆ ಎಣ್ಣೆ ಯಾಕೆ ಅನ್ಕೊಬೇಕು ಎನರ್ಜಿ ಡ್ರಿಂಕ್ಸ್ ಕೂಡಾ ಆಗಬದಹುದು ಎಂದು ಹೇಳುವ ಮೂಲಕ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ಬೆಳಗಾವಿ ನಗರದ ಹಿಂಡಲಗಾದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಸಂಜಯ್ ಪಾಟೀಲ್ ಅವರು.
ಇವತ್ತಿನ ಬಿಜೆಪಿ ಸಮಾವೇಶ ನೋಡಿದರೆ ಇವತ್ತು ರಾತ್ರಿ ಒಂದು‌ ಪೆಗ್ ಜಾಸ್ತಿ ಹಾಜಬೇಕು ಎಂದು ಹೇಳಿಕೆ ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಅನೇಕ ಮಹಿಳೆಯರು ಸಂಜಯ್ ಪಾಟೀಲ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನಂತರ ಈ‌ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.‌

ಇನ್ನು ‌ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ‌ನೀಡಿದ ಸಂಜಯ್ ಪಾಟೀಲ್. ನಾನು ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಇಲ್ಲಿಯೂ ಹೇಳಿಲ್ಲ. ಅಕ್ಕ ಎಂದರೆ ಅವರು ಮಾತ್ರವಲ್ಲ. ನಾನು ಕೆಟ್ಟದಾಗಿ ಮಾತನಾಡಿದೆ ಎಂದು ಹೇಳುವ ಅವರು ಯಾವುದು ಕೆಟ್ಟದು ಎಂದು ತೋರಿಸಲಿ ಎಂದರು.