Select Page

ವಿದ್ಯಾಕಾಶಿ ಮೀರಿಸಿದ ಎಸ್ಸೆಸ್ಸೆಲ್ಸಿ ಟಾಪ್ 10 ವಿದ್ಯಾರ್ಥಿಗಳು

ವಿದ್ಯಾಕಾಶಿ ಮೀರಿಸಿದ ಎಸ್ಸೆಸ್ಸೆಲ್ಸಿ ಟಾಪ್ 10 ವಿದ್ಯಾರ್ಥಿಗಳು

ಬೆಳಗಾವಿ : ಎಸ್ಎಸ್ಎಲ್ ಸಿ  ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು  ಹತ್ತು ವಿದ್ಯಾರ್ಥಿಗಳು ,625 ಕ್ಕೆ 625 ಅಂಕ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಈ ಬಾರಿ ರಾಜ್ಯದಲ್ಲಿ ಮೂರನೆ ಸ್ಥಾನ ಪಡೆದರೆ ಕ್ರಮವಾಗಿ ಬೆಳಗಾವಿ ಜಿಲ್ಲೆ ನಾಲ್ಕನೆ ಸ್ಥಾನ ಪಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ 32,866 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಇದರಲ್ಲಿ 28,857 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶೇ. 87.8 ಪ್ರತಿಶತ ಫಲಿತಾಂಶ ಹೊರಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಫಲಿತಾಂಶ ಸುಧಾರಣೆ ಖಂಡಿದ್ದು ಜಿಲ್ಲೆಯ ಆರು ವಿದ್ಯಾರ್ಥಿಗಳು ,625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮಸ್ಥಾನ ಪಡೆದುಕೊಂಡಿದ್ದಾರೆ.

ಸವದತ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಸಹನಾ ಮಹಾಂತೇಶ ರಾಯರ್, ಬೆಳಗಾವಿ ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ವೆಂಕಟೇಶ ಯೋಗೇಶ ಡೊಂಗ್ರೆ, ಬೆಳಗಾವಿಯ ಎಂ ವಿ ಹೇರವಾಡಕರ್ ಇಂಗ್ಲಿಷ್ ಮಾಧ್ಯಮ ಶಾಲೆಯ ಅಮೋಘ ಎನ್. ಕೌಶಿಕ್,  ರಾಮದುರ್ಗದ ಬಸವೇಶ್ವರ ಹೈಸ್ಕೂಲ್ ವಿದ್ಯಾರ್ಥಿನಿ ರೋಹಿಣಿ ಗೌಡರ್, ಕ್ಯಾಂಬ್ರಿಜ್ ಹೈಸ್ಕೂಲ್ ವಿದ್ಯಾರ್ಥಿ ಆದರ್ಶ ಬಸವರಾಜ ಹಾಲಬಾವಿ ಹಾಗೂ ಖಾನಾಪುರದ ಸಂಗೊಳ್ಳಿ ರಾಯಣ್ಣ ಮೆಮೋರಿಯಲ್ ವಸತಿ ಶಾಲೆ ಸ್ವಾತಿ ಸುರೇಶ ತೋಲಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಈ ಬಾರಿ ಉತ್ತಮ ಸಾಧನೆ ಮಾಡಿದ್ದು ಒಟ್ಟು 44,766 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 39,371 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ. 87.95 ರಷ್ಟು ಫಲಿತಾಂಶ ದಾಖಲಾಗಿದೆ. ಜೊತೆಗೆ ಶೈಕ್ಷಣಿಕ ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದು ಈ ಬರಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ರಾಯಭಾಗದ ಸೃಷ್ಟಿ ಮಹೇಶ ಪತ್ತಾರ, ನಿಪ್ಪಾಣಿ ತಾಲೂಕಿನ ವರ್ಷಾ ಅನೀಲ್ ಪಾಟೀಲ್, ಯಕ್ಸಂಬಾದ ಶಂಭು ಶಿವಾನಂದ ಕನ್ನೈ, ಹಾಗೂ ಅಥಣಿಯ ವಿವೇಕಾನಂದ ಮಹಾಂತೇಶ ಹೊನ್ನಾಳ್ಳಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

01 ) ಸಹನಾ ಮಹಾಂತೇಶ ರಾಯರ್ – ಕರ್ನಾಟಕ ಪಬ್ಲಿಕ್ ಸ್ಕೂಲ್ ಸತ್ತಿಗೆರಿ, ಸವದತ್ತಿ ತಾಲೂಕು
02 ) ಶಂಭು ಶಿವಾನಂದ ಕನ್ನೈ – ಮೋರಾರ್ಜಿ ದೇಸಾಯಿ ವಸತಿ ಶಾಲೆ ಯಕ್ಸಂಬಾ, ಚಿಕ್ಕೋಡಿ
03 ) ಸ್ವಾತಿ ಸುರೇಶ್ ತೊಲಗಿ – ಸಂಗೊಳ್ಳಿ ರಾಯಣ್ಣ ಮೆಮೋರಿಯಲ್ ವಸತಿ ಶಾಲೆ ನಂದಗಡ – ಖಾನಾಪುರ ತಾಲೂಕು
04 ) ವರ್ಷಾ ಅನೀಲ್ ಪಾಟೀಲ್ – ನ್ಯೂ ಸೆಕೆಂಡರಿ ಸ್ಕೂಲ್ ಬೋಜ್, ಚಿಕ್ಕೋಡಿ
05 ) ಆದರ್ಶ ಬಸವರಾಜ ಹಾಲಭಾವಿ – ಕ್ಯಾಂಬ್ರಿಜ್ ಇಎಮ್ ಹೈಸ್ಕೂಲ್, ರಾಮದುರ್ಗ
06 ) ಅಮೋಘ ಎನ್ ಕೌಶಿಕ್ – ಎಂ ವಿ ಹೇರವಾಡಕರ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ತಿಲಕವಾಡಿ – ಬೆಳಗಾವಿ
07 ) ರೋಹಿಣಿ ಗೌಡರ್ – ಬಸವೇಶ್ವರ ಹೈಸ್ಕೂಲ್ ರಾಮದುರ್ಗ
08 ) ಸೃಷ್ಟಿ ಮಹೇಶ್ ಪತ್ತಾರ್ – ಶ್ರೀ ಭಗವಾನ್ ಇಂಗ್ಲಿಷ್ ಮೀಡಿಯಮ್ ಹೈಸ್ಕೂಲ್ ಹಾರೂಗೇರಿ
09 ) ವಿವೇಕಾನಂದ ಮಹಾಂತೇಶ ಹೊನ್ನಳ್ಳಿ – ಅಥಣಿ ವಿದ್ಯಾವರ್ಧಕ ಸಂಸ್ಥೆ
10 ) ವೆಂಕಟೇಶ ಡೊಂಗ್ರೆ – ಕೆಎಲ್ಎಸ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಬೆಳಗಾವಿ

ಶಿಕ್ಷಕರ ಸಂಭ್ರಮ, ಸಿಹಿ ಹಂಚಿ ಶುಭಾಶಯ ವಿನಿಮಯ :

ಚಿಕ್ಕೋಡಿ ತಾಲೂಕಿನ ಬೋಜ್ ಗ್ರಾಮದ ನ್ಯೂ ಸೆಕೆಂಡರಿ ಶಾಲೆ ವಿದ್ಯಾರ್ಥಿನಿ ವರ್ಷಾ ಅನೀಲ್ ಪಾಟೀಲ್ ಅವರನ್ನು ಶಿಕ್ಷಕರು ಸನ್ಮಾನಿಸಿದ ಕ್ಷಣ
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೆಎಲ್ಎಸ್ ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿ ವೆಂಕಟೇಶ ಡೊಂಗ್ರೆ ಗೆ ಸನ್ಮಾನಿಸಿದ ಪ್ರಾಂಶುಪಾಲರಾದ ನಂದಿನಿ ಮುತಾಲಿಕದೇಸಾಯಿ ಹಾಗೂ ಸಾರಿಕಾ ನಾಯ್ಕ್
Advertisement

Leave a reply

Your email address will not be published. Required fields are marked *

error: Content is protected !!