ಅಥಣಿ – ದರೂರ ಸೇತುವೆ ಸ್ಥಿತಿಗತಿ ; ನೀರಿನ ಮಟ್ಟದಲ್ಲಿ ಕೊಂಚ ಏರಿಕೆ
ಬೆಳಗಾವಿ : ಅಥಣಿ ಹಾಗೂ ಗೋಕಾಕ್ ನಡುವೆ ಸಂಪರ್ಕ ಕಲ್ಪಿಸುವ ದರೂರ ಸೇತುವೆ ಇನ್ನೂ ಜಲಾವೃತಗೊಂಡಿಲ್ಲ. ಆದರೆ ಗುರುವಾರಕ್ಕೆ ಹೋಲಿಸಿದರೆ ನದಿ ನೀರಿನ ಮಟ್ಟ ಕೊಂಚ ಏರಿಕೆ ಖಂಡಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ದರೂರ ಸೇತುವೆ ಪ್ರಮುಖ ಸೇತುವೆಗಳಲ್ಲಿ ಒಂದು. ಗೋಕಾಕ್ ಸೇರಿದಂತೆ ಮಹಾರಾಷ್ಟ್ರ ಹಾಗೂ ಬೆಳಗಾವಿಗೆ ಸಂಪರ್ಕ ಸಾಧಿಸಲು ಈ ಸೇತುವೆ ಪ್ರಮುಖ ಪಾತ್ರ ವಹಿಸುತ್ತದೆ.
ದರೂರ ಸೇತುವೆ ಮುಳುಗಡೆಯಾದರೆ ಅನೇಕ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗುತ್ತದೆ. ಸಾಮಾನ್ಯವಾಗಿ ಸೇತುವೆಗೆ ನೀರು ತಡೆಯಾಗುವ ಹಿನ್ನಲೆಯಲ್ಲಿ ಪ್ರವಾಹ ಮತ್ತಷ್ಟು ಏರಿಕೆ ಕಾಣುತ್ತದೆ.
ಕಳೆದ 2019 ರಲ್ಲಿ ದರೂರ ಸೇತುವೆ ಸಂಪೂರ್ಣ ಮುಳುಗಡೆಯಾಗುತ್ತು. ಈ ಸಂದರ್ಭದಲ್ಲಿ ಆಗಿರುವ ಪ್ರವಾಹ ಹಿಂದೆಂದೂ ಆಗಿರಲಿಲ್ಲ. ಸಧ್ಯ ನಿರಂತರ ಮಳೆ ಆವರಿಸಿದ್ದು ಪರಿಸ್ಥಿತಿ ಯಾವ ಮಟ್ಟಿಗೆ ಹೋಗುತ್ತದೆ ಎಂಬ ಭಯದಲ್ಲಿ ಜನರಿದ್ದಾರೆ.
ಚಿಕ್ಕೋಡಿ ಭಾಗದಲ್ಲಿ ಇಂದು ಶುಕ್ರವಾರ ಬೆಳಿಗ್ಗೆಯಿಂದಲೇ ಮಳೆ ಆರ್ಭಟ ಮುಂದುವರಿದಿದ್ದು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಜಿಲ್ಲಾಡಳಿತ ತುರ್ತು ಪರಿಸ್ಥಿತಿಗೆಂದು ಸಹಾಯವಾಣಿ ಪ್ರಾರಂಭಿಸಿದೆ.