ಪತ್ರಕರ್ತ ಮಹೇಶ್ ಭಗಿರಥ ಅವರಿಗೆ ಹೃದಯಸ್ಪರ್ಶಿ ಬಿಳ್ಕೋಡುಗೆ
ಬೆಳಗಾವಿ : ಕಳೆದ ಆರು ವರ್ಷಗಳಿಂದ ಪ್ರಜಾವಾಣಿ ದಿನಪತ್ರಿಕೆಯ ಬೆಳಗಾವಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ ಮಹೇಶ್ ಭಗಿರಥ ಅವರಿಗೆ ಬಳ್ಕೋಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಶುಕ್ರವಾರ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ನಗರದ ವಾರ್ತಾ ಇಲಾಖೆ ಸಭಾಭವನದಲ್ಲಿ ಹಿರಿಯ ಪತ್ರಕರ್ತ ಮಹೇಶ್ ಭಗಿರಥ ಅವರಿಗೆ ಬಳ್ಕೋಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ. ಮಂಡ್ಯ ರಾಜ್ಯದ ವಿಶಿಷ್ಠವಾದ ಜಿಲ್ಲೆ, ಸದಾಕಾಲವೂ ಎಲ್ಲ ಕ್ಷೇತ್ರಗಳಲ್ಲಿ ಜಾಗೃತವಾಗಿರುವ ಗುಣ ಅಲ್ಲಿನ ಜನರಲ್ಲಿದ್ದಂತೆ ಮಹೇಶ್ ಅವರಲ್ಲಿದೆ.
ಯಾವುದೇ ರಾಜಕಾರಣಿ ಇರಲಿ, ಅಧಿಕಾರಿ ಇರಲಿ ಅವರನ್ನು ನೇರವಾಗಿ ಪ್ರಶ್ನೆ ಮಾಡುವ ಹಾಗೂ ಸುದ್ದಿ ಬರೆಯುವ ಗುಣ ಹೊಂದಿದ್ದರು ಎಂದರು. ನೇರವಾಗಿ ಮಾತುಗಾರಿಕೆ ಹೊಂದಿರುವ ವ್ಯಕ್ತಿ. ವೃತ್ತಿಪರ ವ್ಯಕ್ತಿತ್ವ ಹೊಂದಿದ್ದರು. ಇಲ್ಲಿನ ಪತ್ರಕರ್ತರಿಗೆ ಕೆಲಸದ ಒತ್ತಡ ಹೆಚ್ಚಿದ್ದು, ಅಂತಹದರಲ್ಲಿ ಕಳೆದ ಕೆಲವು ವರ್ಷ ಒಬ್ಬರೇ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ವಿಜಾಪೂರ ಮಾತನಾಡಿ, ಮಹೇಶ ಭಗೀರಥ ವೃತ್ತಿಪರತೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಕೆಲಸದ ಒತ್ತಡದ ಮಧ್ಯವೂ ಕುಟುಂಬ ಸದಸ್ಯರಿಗೆ ಸಮಯ ಮೀಸಲಿಡುತ್ತಿದ್ದರು ಎಂದು ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಯಿಸಿದರು. ಹಿರಿಯ ಪತ್ರಕರ್ತ ವಿಲಾಸ್ ಜೋಶಿ ಮಾತನಾಡಿ, ಬೆಳಗಾವಿಯಿಂದ ಮೈಸೂರಿಗೆ ಜಿಲ್ಲೆಗೆ ವರ್ಗಾವಣೆಯಾಗಿರುವ ಮಹೇಶ ಅವರೊಂದಿಗೆ ಅತ್ಯಂತ ಅವಿನಾಭಾವ ಸಂಬಂಧ ಹೊಂದಿರುವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಮಹೇಶ ಭಗೀರಥ, ಬೆಳಗಾವಿ ಸಮೃದ್ಧ ಜಿಲ್ಲೆ, ದಕ್ಷಿಣ ಕರ್ನಾಟಕದವರು ಬೆಳಗಾವಿಗೆ ಬಂದು ಮಾತನಾಡಿದರೆ ರಾಜ್ಯದಲ್ಲಿ ಸದ್ದು ಮಾಡುತ್ತಿತ್ತು. ಈ ನೆಲದ ಮಹಿಮೆ ಎನ್ನಬಹುದು. ಇಂತಹ ನೆಲದಲ್ಲಿ ಆರು ವರ್ಷಗಳ ಕಾಲ ಕೆಲಸ ನಿರ್ವಹಿಸಿರುವುದು ನನ್ನಪುಣ್ಯ. ಜಿಲ್ಲೆಯ ಸಹೋದ್ಯೋಗಿಗಳು ನೀಡಿರುವ ಸಹಕಾರದಿಂದ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಬೆಳಗಾವಿಗರ ಪ್ರೀತಿ ಅತೀವೃಷ್ಠಿಗಿಂತ ಹೆಚ್ಚಾಗಿದೆ. ನನ್ನ ಕೆಲಸವನ್ನು ನಾನು ನಿರ್ವಹಿಸಿದ್ದೇನೆ. ಆದರು ಇಲ್ಲಿನ ಜನರು ನನ್ನ ಕೆಲಸವನ್ನು ಗುರುತಿಸಿರುವುದು ಹೃದಯ ಶ್ರೀಮಂತಿಕೆ ತೋರಿದ್ದಿರಿ. ಕಳೆದ ಆರು ವರ್ಷಗಳ ಕಾಲ ಸೇವಾವೃತ್ತಿ ನಿರ್ವಹಿಸಿರುವ ಕುರಿತು ಮೆಲುಕು ಹಾಕುವ ಮೂಲಕ ಭಾವುಕರಾದರು.
ಹಿರಿಯ ಪತ್ರಕರ್ತರಾದ ಕೇಶವ ಆದಿ, ಶ್ರೀಕಾಂತ ಕುಬಕಡ್ಡಿ, ಪ್ರದೀಪ ಮೇಲಿನಮನಿ, ಇಮಾಮಹುಸೇನ್ ಗೂಡನವರ ಸೇರಿದಂತೆ ಇತರರು ಮಾತನಾಡಿದರು. ಕೀರ್ತಿ ಕಾಸರಗೋಡು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮಹೇಶ ಭಗೀರಥ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ರಾಜು ಗವಳಿ, ಗಣೇಶ ಅಮೀನಗಡ, ಪತ್ರಕರ್ತರಾದ ಜಿತೇಂದ್ರ ಕಾಂಬಳೆ, ಮಂಜುನಾಥ ಕೋಳಿಗುಡ್ಡ, ಸುನೀಲ್ ಪಾಟೀಲ್, ರಾಜಶೇಖರಯ್ಯ ಹಿರೇಮಠ, ಸುರೇಶ ನೇರ್ಲಿ, ಜಗದೀಶ ವಿರಕ್ತಮಠ, ಅಶೋಕ ಮುದ್ದಣ್ಣವರ, ಪ್ರಶಾಂತ ಮಲಗಾಂವಿ, ಜಗದೀಶ ಹೊಂಬಳಿ, ಏಕನಾಥ ಅಗಸಿಮನಿ, ಅರುಣ ಯಳ್ಳೂರಕರ, ವಿಶ್ವನಾಥ ದೇಸಾಯಿ ಸೇರಿದಂತೆ ಇನ್ನೀತರ ಪತ್ರಕರ್ತರು ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.