Select Page


ನ. 24 ಕ್ಕೆ “ಸ್ಕೂಲ್ ಡೇಸ್” ಚಲನಚಿತ್ರ ರಾಜ್ಯಾದ್ಯಂತ ತೆರೆಗೆ: ಉಮೇಶ ಹಿರೇಮಠ

<br />ನ. 24 ಕ್ಕೆ “ಸ್ಕೂಲ್ ಡೇಸ್” ಚಲನಚಿತ್ರ ರಾಜ್ಯಾದ್ಯಂತ ತೆರೆಗೆ: ಉಮೇಶ ಹಿರೇಮಠ

ಬೆಳಗಾವಿ: ಶಾಲಾ ದಿನಗಳನ್ನು ಮೇಲುಕು ಹಾಕುವ ಬಹು ನಿರೀಕ್ಷಿತ ಚಲನಚಿತ್ರ “ಸ್ಕೂಲ್ ಡೇಸ್” ನ.೨೪ ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ಮಾಪಕ ಉಮೇಶ ಹಿರೇಮಠ ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸ್ಕೂಲ್ ಡೇಸ್” ಚಿತ್ರ  ಸಂಪೂರ್ಣ ಉತ್ತರ ಕರ್ನಾಟಕದ ಭಾಷೆಯ ಸೊಗಡಿನಲ್ಲಿ ಮೂಡಿಬಂದಿದೆ. ವ್ಯಕ್ತಿಯ ಬದುಕಿನ ನೈತಿಕ ಮೌಲ್ಯಗಳನ್ನು ತಿಳಿಸುವ ಈ ಚಿತ್ರವನ್ನು ಬೈಲಹೊಂಗಲದ ಉದ್ಯಮಿ ಹಾಗೂ ಪತ್ರಕರ್ತ ಉಮೇಶ ಹಿರೇಮಠ ತಮ್ಮ ಶ್ರೀ ಗುರು ಮಹಾಂತ ಕ್ರಿಯೇಷನ್ಸ್ ಬೈಲಹೊಂಗಲ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ ಚಿತ್ರವನ್ನು ಸಂಜಯ್ ನಿರ್ದೇಶಿಸಿದ್ದಾರೆ ಎಂದರು.

ಚಿತ್ರದ ನಾಯಕಿ ಪ್ರಿಯಾ, ನೇಹಾ ಹಾಗೂ ಸಂದೀಪ್ ನಟನೆಯೊಂದಿಗೆ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಪ್ರತಿಯೊಬ್ಬರೂ ಶಾಲೆಯ ಆ ದಿನಗಳನ್ನು ನೆನಪಿಸಿಕೊಂಡರೆ. ಆ ತುಂಟಾಟ, ಗೆಳೆಯರ ಒಡನಾಟ, ಕೆಲ ಪೋಲಿತನದ ಚಟುವಟಿಕೆಗಳಿಂದ.

ನಿಧಾನಗತಿಯಲ್ಲಿ ಪ್ರೀತಿಯ ಹೊಳೆಯಲ್ಲಿ ಬೀಳುವಿಕೆ, ಗೆಳೆಯರು ಹಾಗೂ ಶಿಕ್ಷಕರೊಂದಿಗೆ ಚೇಷ್ಟೆಗಳ ಸನ್ನಿವೇಶಗಳಲ್ಲಿ ನಮ್ಮ ನಾಡಿನ ಜವಾರಿ ಭಾಷೆಯ ಸೊಗಡಿನ ತುಂಬ ಹಾಸ್ಯಭರಿತ ಸಂಪೂರ್ಣ ಮನರಂಜನಾತ್ಮಕ ಚಲನಚಿತ್ರ  ಇದಾಗಿದೆ ಎಂದರು.

ಈ ಹೊಸ ರೀತಿಯ ಚಿತ್ರದಲ್ಲಿ ಮೂರು ವಿಶೇಷ ಬಗೆಯ ಹಾಡುಗಳಿವೆ.  ಈ ಚಿತ್ರ ಅದ್ಬುತವಾಗಿ ಮೂಡಿಬಂದಿದ್ದು, ನಿಮ್ಮೆಲ್ಲರ ಸಹಾಯ-ಸಹಕಾರ ಚಿತ್ರಕ್ಕೆ ಅಗತ್ಯವಿದೆ ಎಂದು ಹೇಳಿದರು. ಈ ವೇಳೆ ನಿರ್ದೇಶಕ ಸಂಜಯ್ ಎಚ್,ನಾಯಕಿ ಪ್ರಿಯಾ, ನೇಹಾ ಹಾಗೂ ಸಂದೀಪ್ ಹಾಗೂ ಇತರರು ಇದ್ದರು.

Advertisement

Leave a reply

Your email address will not be published. Required fields are marked *