
ಜಾನಕಿರಾಮನ ಮುದ್ದಾದ ಪ್ರೇಮ ಕಥೆಯನ್ನು ಹೊತ್ತು ಬರುತ್ತಿದೆ ಪ್ರತಿಭಾವಂತರ ತಂಡ

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ದಿನೇದಿನೇ ಹೊಸಬರ ತಂಡಗಳು ಆಗಸುತ್ತಲೆ ಇವೆ. ಅದೇ ಸಾಲಿನಲ್ಲಿ ಹೊಸ ನಿರ್ದೇಶಕರ ತಂಡವೊಂದು ಎಂಟ್ರಿ ಕೊಟ್ಟು ಹೊಸ ಚಿತ್ರದ ತಯಾರಿಯಲ್ಲಿದ್ದಾರೆ.
ಸಿದ್ಧಾರ್ಥ್ ಮರಡೆಪ್ಪ ನಿರ್ದೇಶಕರಾಗಿ ಚೊಚ್ಚಲ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿ ಹೆಸರುವಾಸಿ ಸಿನಿಮಾಗಳಾದ ಮಾಸ್ತಿಗುಡಿ, ಮೈನಾ, ದೃಶ್ಯ-2 ಹೀಗೆ ಹತ್ತು ಹಲವಾರು ಸಿನಿಮಾಗಳಿಗೆ ಕೊ-ಡೈರೆಕ್ಟರ್ ಆಗಿ ತಂತ್ರಜ್ಞನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಉತ್ತರ ಕರ್ನಾಟಕದ ಕಥಾ ಹಂದರವನ್ನು ಹೊಂದಿರುವ ಈ ಮುದ್ದಾದ ಪ್ರೇಮ ಕಥೆಯು ಅಪ್ಪಟ ದೇಸಿ ಶೈಲಿಯಲ್ಲಿ ಮೂಡಿ ಬರಲಿದ್ದು ಮನರಂಜನೆಗೆ ಯಾವುದೇ ರೀತಿಯ ಕೊರತೆ ಇರದೆ ಎಲ್ಲಾ ತರಹದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುತ್ತಾರೆ ನಿರ್ದೇಶಕರು.
ನಾಯಕ ನಟನಾಗಿ ಅಕ್ಷಿತ್ ಶಶಿಕುಮಾರ್ ಹಾಗೂ ನಾಯಕಿಯಾಗಿ ಅಪೂರ್ವ (ದೃಶ್ಯ ,ವಿಕ್ಟರಿ, ಕೃಷ್ಣ ಟಾಕೀಸ್ ಖ್ಯಾತಿಯ) ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಮಾಸ್ ಹಿನ್ನಲೆಯಲ್ಲಿ ಕಥೆ ಸಾಗುವ ಕಥೆಗೆ ಖಳನಾಯಕರಾಗಿ ರವಿಶಂಕರ್, ಹೀರೊ ತಾಯಿಯಾಗಿ ಶೃತಿ , ಹೀರೋಇನ್ ತಾಯಿಯಾಗಿ ತಾರಾ ಅವರು ಸಾಥ್ ನೀಡಲಿದ್ದಾರೆ.
ಅರ್ಜುನ ಜನ್ಯರ ಸಂಗೀತದ ಜೊತೆಗೆ ರವಿವರ್ಮ ಸ್ಟಂಟ್ ಇರುತ್ತದೆ.

ಉದಯ್ ಬಲ್ಲಾಳ್ ಅವರು ಕ್ಯಾಮೆರಾ ನಿರ್ವಹಿಸಿದರೆ ಮೋಹನ್ ಕೊಲ್ಲಾಪುರ ಸಂಕಲ ಮಾಡುತ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್, ಗೌಸ್ ಪೀಸ್,ಮಹಾಂತೇಶ ರಾಮದುರ್ಗ ಗೀತೆ ಬರೆಯುತ್ತಿದ್ದಾರೆ.
ಟೆಕ್ನಿಕಲ್ ವಿಭಾಗದಲ್ಲಿ ಪ್ರಶಾಂತ್ ಹೈಬತ್,ಕರಿಯಪ್ಪ ಕವಲೂರು,ಬಸವರಾಜ್ ಮೇತ್ರಿ ಕಾರ್ಯನಿರ್ವಹಿಹಿಸುತ್ತಿದ್ದು
ಸದ್ಯದಲ್ಲೆ ಚಿತ್ರೀಕರಣ ನಡೆಸಲು ಸಜ್ಜಾಗಿರುವ ಚಿತ್ರತಂಡ ನಾಳೆ ಹಿರೋಯಿನ್ ಅಪೂರ್ವ ಅವರ ಬರ್ತಡೆಗೆ ಮೋಷನ್ ಪೋಸ್ಟರ್ ಒಂದನ್ನು ರಿಲೀಸ್ ಮಾಡಿ ಸಂಚಲನ ಮೂಡಿಸಲು ಸಿದ್ದವಾಗಿದೆ.