ಹಿಂದುಸ್ತಾನ್ ರತ್ನ ಪ್ರಶಸ್ತಿ ಪಡೆದ ಬೆಳಗಾವಿ ಪೋರ ಆಯುಶ್
ಬೆಳಗಾವಿ : ಕುಂದಾನಗರಿ ಪೋರ ಹಾಗೂ ಮಾಡೆಲ್ ಆಯುಶ್ ಹೊಸಕೋಟಿ ಅವರಿಗೆ ಮುಂಬೈ ಗ್ಲೋಬಲ್ ಪ್ರೆಜೆನ್ಸ್ ವತಿಯಿಂದ ಕೊಡಮಾಡುವ ಹಿಂದುಸ್ತಾನ್ ರತ್ನ ಪ್ರಶಸ್ತಿ ದೊರಕಿದೆ.
ಅತ್ಯುತ್ತಮ ಮಕ್ಕಳ ಮಾಡೆಲಿಂಗ್ ವಿಭಾಗದಲ್ಲಿ ಆಯುಶ್ ಹೊಸಕೋಟಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಸೋಮವಾರ ಮೇ 9 ರಂದು ಮುಂಬೈ ಕ್ಲಬ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪುರಸ್ಕಾರ ಪಡೆದರು. ಈ ಸಂದರ್ಭದಲ್ಲಿ ಖ್ಯಾತ ನಿರ್ದೇಶಕರು ಹಾಗೂ ನಟಿ ಆರತಿ ನಾಗಪಾಲ್, ನಟಿ ದೀಪಕ್ ಬಾಲರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖ್ಯಾತ ಬಾಲಿವುಡ್ ನಟರಿಗೆ ಆಯುಶ್ ಆಕರ್ಷಕವಾಗಿದ್ದು ವಿಶೇಷ.