
ಬೆಳಗಾವಿ : ಕಂಠಪೂರ್ತಿ ಕುಡಿದು ತಹಶಿಲ್ದಾರ ಕಚೇರಿ ಮುಂದೆ ಮಲಗಿದ ಗ್ರಾಮಲೆಕ್ಕಾಧಿಕಾರಿ, ದುರ್ವರ್ತನೆ ವೀಡಿಯೋ

ಬೆಳಗಾವಿ : ಗ್ರಮ ಲೆಕ್ಕಾಧಿಕಾರಿ ಕಂಠಪೂರ್ತಿ ಕುಡಿದು ತಹಶಿಲ್ದಾರರ ಕಚೇರಿ ಮುಂದೆ ಕೆಲಸದ ಸಮಯದಲ್ಲೇ ಮಲಗಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಡೆದಿದೆ.
ಕೆಲಸದ ಸಮಯದಲ್ಲೇ ಕಂಠಪೂರ್ತಿ ಕುಡಿದಿದ್ದ ಸಂಜು ಬೆಣ್ಣಿ ಎಂಬ ಗ್ರಾಮ ಗ್ರಾಮಲೆಕ್ಕಾಧಿಕಾರಿ ಸವದತ್ತಿ ತಹಶಿಲ್ದಾರ ಕಚೇರಿ ಮುಂದೆ ಮಲಗಿ ರಂಪಾಟ ಮಾಡಿದ್ದಾನೆ. ಇದೆಲ್ಲವನ್ನೂ ನೋಡಿದ ತಹಶಿಲ್ದಾರ ಪ್ರಶಾಂತ್ ಪಾಟೀಲ ಯಾವುದೇ ಪ್ರತಿಕ್ರಿಯೆ ನೀಡಲು ಹೋಗಲಿಲ್ಲ.
ಗ್ರಾಮಲೆಕ್ಕಾಧಿಕಾರಿಯ ವರ್ತನೆ ಕಂಡು ಕಾಣದಂತೆ ತಹಶೀಲ್ದಾರ್ ಇದ್ದಾರೆ. ಹಲವು ಬಾರಿ ಸಂಜು ದುರ್ವರ್ತನೆ ಕಂಡು ಸಾರ್ವಜನಿಕರು ಬೇಸತ್ತಿದ್ದಾರೆ. ಗ್ರಾಮಲೆಕ್ಕಾಧಿಕಾರಿಯ ರಂಪಾಟ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.