ಸಾಲ ಉಳಿಸಿಕೊಂಡವರ ಪಟ್ಟಿಯಲ್ಲಿ ಶಾಸಕಿ ಹೆಬ್ಬಾಳ್ಕರ್ ಹೆಸರಿದೆ : ಸಚಿವ ಸೋಮಶೇಖರ್
ಬೆಳಗಾವಿ : ಸಹಕಾರ ಕ್ಷೇತ್ರದಲ್ಲಿ ಕೇವಲ ರಮೇಶ ಜಾರಕಿಹೊಳಿಯವರದ್ದು ಮಾತ್ರ ಸಾಲ ಇಲ್ಲ, ಲಕ್ಷ್ಮೀ ಹೆಬ್ಬಾಳ್ಕರ್, ಬಂಡೇಪ್ಪ ಕಾಂಶಪೂರ ಸಹ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ತಿಳಿಸಿದರು.
ಮಂಗಳವಾರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೇವಲ ರಮೇಶ ಜಾರಕಿಹೊಳಿ ಅಲ್ಲ, ಲಕ್ಷ್ಮೀ ಹೆಬ್ಬಾಳ್ಕರ್, ಬಂಡೆಪ್ಪ ಕಾಂಶಪೂರ್ ಬಾಕಿ ಉಳಿಸಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆ ಇರುವ 25 ಜನರು ಸಾಲ ಪಡೆದಿದ್ದಾರೆ ಎಂದರು.
ಕೇಲವರು ಬಡ್ಡಿನು ಹಾಗೂ ಅಸಲು ಕಟ್ಟಿಲ್ಲ. ದಕ್ಷಿಣ ಕನ್ನಡ, ತುಮಕೂರು ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದಿದ್ದಾರೆ. ರಾಜ್ಯದಲ್ಲಿ 6 ಸಾವಿರ ಕೋಟಿ ರೂಪಾಯಿ ಸಾಲ ಬಾಕಿ ಉಳಿದಿದೆ. ಇದನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಕ್ಕರೆ ಕಾರ್ಖಾನೆಯಿಂದ ಹಣ ಬಾಕಿ. ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಬಾಕಿ.
ಯಾರೆಲ್ಲ ಬಾಕಿ ಉಳಿಸಿಕೊಂಡಿದ್ದಾರೆ ಅವರಿಗೆಲ್ಲ ನೋಟಿಸ್ ನೀಡಲಾಗಿದೆ. ಸಾಲ ಕೊಟ್ಟಿದ್ದು, ಅದನ್ನು ಮರುಪಾವತಿ ಮಾಡಲು ನೋಟಿಸ್ ಕೊಟ್ಟಿದ್ದಾರೆ ಎಂದರು.