Video : ಝೀ ಕನ್ನಡ ಮಾಡಿಕೊಂಡ ಯಡವಟ್ಟು : ನಾಡಿನ ಜನರ ಕ್ಷಮೆ ಕೇಳಿದ ಚಾನೆಲ್
ಬೆಂಗಳೂರು : ಕರಾವಳಿ ಗಂಡು ಕಲೆ ಎಂದೇ ಖ್ಯಾತಿ ಹೊಂದಿರುವ ಯಕ್ಷಗಾನಕ್ಕೆ ಝೀ ಕನ್ನಡ ( Zee Kannada ) ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ( Dance Karnataka Dance ) ಕಾರ್ಯಕ್ರಮದಲ್ಲಿ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಝೀ ಕನ್ನಡದಲ್ಲಿ ಪ್ರಸಾರವಾದ ರಿಯಾಲಿಟಿ ಶೋ ಒಂದರಲ್ಲಿ ಯಕ್ಷಗಾನಕ್ಕೆ ಅವಮಾನವಾಗಿದೆ ಅನ್ನುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ #boycottzeekannada ಆಂದೋಲನ ಪ್ರಾರಂಭವಾಗಿದೆ. ಇದಕ್ಕೆ ಸ್ಪಂದಿಸಿರುವ ಹಲವಾರು ಮಂದಿ ತಮ್ಮ ಸೆಟ್ ಅಪ್ ಬಾಕ್ಸ್ ನಲ್ಲಿ ಝೀ ಕನ್ನಡ ವಾಹಿನಿಯ ಚಂದಾದಾರಿಕೆಯನ್ನು ಅಂತ್ಯಗೊಳಿಸಿದ್ದಾರೆ.
ಕರಾವಳಿ ಜನರು ಅತ್ಯಂತ ಪೂಜ್ಯ ಭಾವದಿಂದ ನೋಡುವ ಯಕ್ಷಗಾನ ಕಲೆಗೆ ಝೀ ಕನ್ನಡ ಕಾರ್ಯಕ್ರಮದಲ್ಲಿ ಅವಮಾನ ಮಾಡಲಾಗಿದೆ ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ವಾಹಿನಿ. ಕಳೆದ ವಾರ ಪ್ರಸಾರವಾದ ಡ್ಯಾನ್ಸ್ ಕರ್ನಾಟಕ ಕಾರ್ಯಕ್ರಮದಲ್ಲಿ ಯಕ್ಷಗಾನಕ್ಕೆ ಅವಮಾನ ಮಾಡಿದ್ದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಕ್ಷಮೆ ಕೇಳುವುದಾಗಿ ಹೇಳಿದೆ.